14 ವರ್ಷದ ಶಾಲಾ ಬಾಲಕಿಯ ಅತ್ಯಾಚಾರ

ಶನಿವಾರ, 5 ಏಪ್ರಿಲ್ 2014 (15:56 IST)
ಮನೆಪಾಠಕ್ಕೆಂದು ಹೋಗುತ್ತಿದ್ದ 14 ವರ್ಷದ ಶಾಲಾ ಬಾಲಕಿಯ ಮೇಲೆ ಆಕೆಗೆ ಪರಿಚಯವಿರುವ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಆಗ್ರಾದಲ್ಲಿ ವರದಿಯಾಗಿದೆ. ದಾರಿ ಮಧ್ಯೆ ಆಕೆಯನ್ನು ಅಡ್ಡಗಟ್ಟಿದ 3 ಜನ ಹುಡುಗರು ಆಕೆಯನ್ನು ಎಳೆದೊಯ್ದು, ಕಾರಿನಲ್ಲಿ ಕುರಿಸಿದ್ದಾರೆ. ನಂತರ ಅವರಲ್ಲೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಗ್ರಾದ ಪೋಲಿಸರು ತಿಳಿಸಿದ್ದಾರೆ.
PTI

ವೈದ್ಯಕೀಯ ವರದಿ ಆಕೆಯ ಮೇಲೆ ಅತ್ಯಾಚಾರವಾಗಿರುವುದನ್ನು ಸಾಬೀತು ಪಡಿಸಿದೆ.

ಈಗ ತಲೆಮರೆಸಿಕೊಂಡಿರುವ ಮೂವರು ಹುಡುಗರು ಬಾಲಕಿಗೆ ಪರಿಚಯ ಇರುವವರೆ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

"ನಾನು ಟ್ಯೂಶನ್ ಕ್ಲಾಸಿಗೆ ಹೋಗುತ್ತಿದ್ದಾಗ ನನ್ನನ್ನು ಅಡ್ಡಗಟ್ಟಿದ ನೆರೆಮನೆಯ ಮೂವರು ಹುಡುಗರು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಕೊಂಡರು. ನಂತರ ಯಾರೂ ಇಲ್ಲದ ಹಳೆಯ ಮನೆಯೊಂದಕ್ಕೆ ಕರೆದು ಕೊಂಡು ಹೋದರು. ಅವರಲ್ಲಿ ಒಬ್ಬ ಹುಡುಗ ನನ್ನ ಮೇಲೆ ಅತ್ಯಾಚಾರ ಎಸಗಿದ. ಉಳಿದ ಇಬ್ಬರು ಆ ದ್ರಶ್ಯವನ್ನು ನೋಡುತ್ತ ಬದಿಯಲ್ಲಿ ನಿಂತುಕೊಂಡರು" ಎಂದು ಬಲಿಪಶು ಬಾಲಕಿ ಪೋಲಿಸರಿಗೆ ತಿಳಿಸಿದ್ದಾಳೆ.

ಆ ನಂತರ ಆಕೆಯನ್ನು ಮಧುನಗರದ ಹತ್ತಿರ ಎಸೆಯಲಾಯಿತು. ಅಲ್ಲಿಂದ ಆಕೆ ನಡೆದುಕೊಂಡು ಮನೆ ತಲುಪಿದಳು ಎಂದು ತಿಳಿದು ಬಂದಿದೆ.

ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಸದರ್ ಪೋಲಿಸ್ ಠಾಣೆ ಇನ್ಸಪೆಕ್ಟರ್ ಇಂದ್ರಜಿತ್ ಸಿಂಗ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ