ಮಹಾರಾಷ್ಟ್ರದ ಮುರುಡ್ ಬೀಚ್‌ನಲ್ಲಿ 14 ವಿದ್ಯಾರ್ಥಿಗಳು ನೀರುಪಾಲು

ಸೋಮವಾರ, 1 ಫೆಬ್ರವರಿ 2016 (18:39 IST)
ಮಹಾರಾಷ್ಟ್ರದ ರಾಯಗಢ್ ಬಳಿಯಿರುವ ಮುರುಡ್ ಬೀಚ್‌ನಲ್ಲಿ ಈಜುತ್ತಿದ್ದ 14 ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಭೀಕರ ದುರಂತ ಸಂಭವಿಸಿದೆ.  ಒಟ್ಟು 126 ವಿದ್ಯಾರ್ಥಿಗಳು ಪಿಕ್ನಿಕ್‌ಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.

ಮುರುಡ್ ಬೀಚ್‌ನಲ್ಲಿ ಈಜುವಾಗ ಅಲೆಗಳ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿದ್ದಾರೆ.  ಮಹಾರಾಷ್ಟ್ರದ ಪುಣೆಯ ಅಬೇದಾ ಇನಾಂದಾರ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು,  14 ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ ಕೆಲವರು ನೀರಿನಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿದ್ದು, ಅವರಿಗಾಗಿ ಶೋಧ ನಡೆದಿದೆ.

 ಡಿಗ್ರಿ ತರಗತಿಯ ವಿದ್ಯಾರ್ಥಿಗಳು ಮೂರು ಖಾಸಗಿ ಬಸ್‌ಗಳಲ್ಲಿ ಪುಣೆಯಿಂದ ಬೀಚ್‌ಗೆ ಆಗಮಿಸಿದ್ದರು. ಸಂಜೆ  4ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಮೃತರನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ ಎಂದು ಮುರುಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ