ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿಯ ಗರ್ಭಪಾತಕ್ಕೆ ಕೋರ್ಟ್ ನಿರಾಕರಣೆ

ಶುಕ್ರವಾರ, 24 ಜುಲೈ 2015 (15:46 IST)
ಟೈಫೈಡ್ ಚಿಕಿತ್ಸೆಗಾಗಿ ಬಂದ ಬಾಲಕಿಗೆ ವೈದ್ಯಮಹಾಶಯನೊಬ್ಬ ಪ್ರಜ್ಞೆ ತಪ್ಪುವ ಔಷಧಿ ನೀಡಿ ಅತ್ಯಾಚಾರವೆಸಗಿದ ಗರ್ಭಧರಿಸಲು ಕಾರಣವಾಗಿದ್ದಾನೆ. ಇದೀಗ ಅಪ್ರಾಪ್ಳವಾಗಿದ್ದರಿಂದ ಗರ್ಭ ತೆಗೆಸಲು ಅನುಮತಿ ನೀಡಬೇಕು ಎಂದು ಬಾಲಕಿಯ ಪೋಷಕರು ನ್ಯಾಯಲಯದ ಮೊರೆಹೋಗಿದ್ದರು. 
 
14 ವರ್ಷದ ಬಾಲಕಿಯ ಗರ್ಭವನ್ನು ತೆಗೆಸಿಹಾಕಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ಕೋರಿ ಬಾಲಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.
 
ಭಾರತದ ಸಂವಿಧಾನದ ಪ್ರಕಾರ ಗರ್ಭಧರಿಸಿ 20 ತಿಂಗಳ ನಂತರ ಅಬಾರ್ಷನ್ ಮಾಡಿಸಲು ಕಾನೂನು ಅನುಮತಿ ನೀಡುವುದಿಲ್ಲ. ಬಾಲಕಿ ಗರ್ಭಧರಿಸಿ 24 ತಿಂಗಳುಗಳಾಗಿದ್ದರಿಂದ ಅನುಮತಿ ನೀಡಲಾಗದು ಎಂದು ನ್ಯಾಯಮೂರ್ತಿ ಅಭಿಲಾಷಾ ಕುಮಾರಿ ಆದೇಶ ನೀಡಿದ್ದಾರೆ.
 
ಸಬರ್‌ಕಂಠ್ ಜಿಲ್ಲಾಡಳಿತ ಬಾಲಕಿಯ ಯೋಗಕ್ಷೇಮ ನೋಡಿಕೊಳ್ಳುವುದಲ್ಲದೇ ಆಕೆಗೆ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಬೇಕು ಎಂದು ನ್ಯಾಯಮೂರ್ತಿಗಳು ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.
 
ಪೊಲೀಸರು ಆರೋಪಿ ವೈದ್ಯನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ