16 ವರ್ಷದ ವಿವಾಹಿತೆಯ ಮೇಲೆ ಮೂವರು ಆರೋಪಿಗಳಿಂದ ಮೂರು ದಿನ ಗ್ಯಾಂಗ್‌ರೇಪ್

ಶನಿವಾರ, 5 ಏಪ್ರಿಲ್ 2014 (14:57 IST)
16 ವರ್ಷ ವಯಸ್ಸಿನ ವಿವಾಹಿತೆಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಮೂರು ದಿನಗಳ ಕಾಲ ಮೂವರು ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಅಳ್ವಾರ್ ಜಿಲ್ಲೆಯ ಪೊಲೀಸ್ ಮೂಲಗಳು ತಿಳಿಸಿವೆ.

ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಆಕೆಯ ಸೋದರಮಾವ ಆರೋಪಿಗಳಾದ ಸುರೇಂದ್ರ ಮೀನಾ, ಅಶೋಕ್ ಮೀನಾ ಮತ್ತು ಮೌಸಮ್ ಮೀನಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್‌ರೇಪ್ ಅಪಹರಣ ಪ್ರಕರಣ ದಾಖಲಿಸಿದ್ದಾರೆ.

ಮೂವರು ಆರೋಪಿಗಳು 20-21 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 4 ರಂದು ಬಾಲ್ಯದಲ್ಲಿಯೇ ವಿವಾಹವಾಗಿದ್ದ 16 ವಯಸ್ಸಿನ ಯುವತಿ ತನ್ನ ತಂದೆ ತಾಯಿಯ ಗ್ರಾಮಕ್ಕೆ ತೆರಳಲು ಬಸ್‌ನಿಲ್ದಾಣದ ಬಳಿ ಬಸ್‌ಗಾಗಿ ಕಾಯಿತ್ತಿದ್ದಳು. ಆಕೆಗೆ ಪರಿಚಿತನಾಗಿದ್ದ ಆರೋಪಿಯೊಬ್ಬ ಕಾರಿನಲ್ಲಿ ಲಿಫ್ಟ್‌ ನೀಡುವುದಾಗಿ ಆಹ್ವಾನ ನೀಡಿದ್ದಾನೆ.

PR
ಏತನ್ಮಧ್ಯೆ, ಯುವತಿಯನ್ನು ಆಕೆಯ ತಂದೆಯ ಗ್ರಾಮಕ್ಕೆ ಕರೆದುಕೊಂಡು ಹೋಗದೇ ನಿರ್ಜನ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಕರೆದುಕೊಂಡು ಹೋದ ಮೂವರು ಆರೋಪಿಗಳು ಆಕೆಯ ಮೇಲೆ ಮೂರು ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಿದ್ದಾರೆ.

ಫೆಬ್ರವರಿ 7 ರಂದು ಯುವತಿಯನ್ನು ಮಳಕೇರಾ ಗ್ರಾಮದಲ್ಲಿ ಇಳಿಸಿ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ಪರಾರಿಯಾಗಿದ್ದಾರೆ.

ನಂತರ ಯುವತಿ ತನ್ನ ಸೋದರಮಾವನಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದಾಗ, ಕುಟುಂಬದ ಸದಸ್ಯರು ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ