16 ಮಹಿಳೆಯರ ಮೇಲೆ ಪೊಲೀಸರಿಂದ ಅತ್ಯಾಚಾರ

ಸೋಮವಾರ, 9 ಜನವರಿ 2017 (10:48 IST)
ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ, ರಕ್ಷಕರೇ ಭಕ್ಷಕರಾದ ಹೇಯ ಕೃತ್ಯ. ರಕ್ಷಣೆ ನೀಡಬೇಕಾದ ಆರಕ್ಷಕರೇ ಮಹಿಳೆಯರ ಮೇಲೆ ಕೀಚಕತನ ಪ್ರದರ್ಶಿಸಿದ ಬೆಚ್ಚಿ ಬೀಳಿಸುವ ಖಂಡನೀಯ ಘಟನೆ ಛತ್ತೀಸ್‌ಘಡ‌ದಲ್ಲಿ ನಡೆದಿದೆ
 
ಪೊಲೀಸ್ ಸಿಬ್ಬಂದಿ 16 ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಮತ್ತು ದೈಹಿಕ ದೌರ್ಜನ್ಯ  ಎಸಗಿದ್ದಾರೆಂದು  ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯ ಸರ್ಕಾರಕ್ಕೆ ಶನಿವಾರ ನೋಟಿಸ್ ಕಳುಹಿದ್ದು, ಆಪಾದಿತ ಅಪರಾಧಗಳಿಗೆ ಸರ್ಕಾರವೇ ಪರೋಕ್ಷ ಹೊಣೆ ಎಂದಿದೆ. ಜತೆಗೆ ಸಂತ್ರಸ್ತೆಯರಿಗೆ 37 ಲಕ್ಷ ರೂಪಾಯಿ  ಮಧ್ಯಂತರ ಪರಿಹಾರ ನೀಡುವಂತೆ ನಾವು ಸರ್ಕಾರವನ್ನೇಕೆ ಶಿಫಾರಸ್ಸು ಮಾಡಬಾರದು ಎಂದು ಪ್ರಶ್ನಿಸಿದೆ.
 
ಅತ್ಯಾಚಾರಕ್ಕೊಳಗಾದ 8 ಮಹಿಳೆಯರಿಗೆ ತಲಾ 3 ಲಕ್ಷ ರೂಪಾಯಿ. ಲೈಂಗಿಕ ಹಲ್ಲೆಗೊಳಗಾದ ಮಹಿಳೆಯರಿಗೆ ತಲಾ 2 ಲಕ್ಷ ರೂಪಾಯಿ, ದೈಹಿಕ ಹಲ್ಲೆಗೊಳಗಾದವರಿಗೆ ತಲಾ 50ಸಾವಿರ ಪರಿಹಾರ ವಿತರಿಸಲು ಆಯೋಗ ಶಿಫಾರಸ್ಸು ಮಾಡಿದೆ. 
 
34 ಜನರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ, ಆದರೆ 15 ಮಂದಿ ಪೀಡಿತರಿಂದ ಮಾತ್ರ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
 
ಛತ್ತೀಸ್‌ಗಢ ಪೊಲೀಸರು 5 ಹಳ್ಳಿಗಳಲ್ಲಿ 40ಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿರುವುದಾಗಿ ಆಯೋಗ ಹೇಳಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ