17 ವರ್ಷಗಳ ಹಗ್ಗಜಗ್ಗಾಟದ ಬಳಿಕ ಜಿಎಸ್`ಟಿ ಜಾರಿ: ಇಲ್ಲಿದೆ ಕಂಪ್ಲೀಟ್ ಚಿತ್ರಣ

ಶನಿವಾರ, 1 ಜುಲೈ 2017 (11:09 IST)
ಜಿಎಸ್`ಟಿಯನ್ನ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ವಿರೋಧಿಸಿತ್ತು. ಇದೀಗ, ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಅದೇ ರೀತಿ ಮಾಡಿದೆ. 17 ವರ್ಷಗಳ ಏಳುಬೀಳುಗಳ ಬಳಿಕ ಮಧ್ಯರಾತ್ರಿ ಜಿಎಸ್`ಟಿ ಜಾರಿಗೆ ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟ್ ಬ್ಯಾನ್ ಬಳಿಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

- ರಾಜೀವ್ ಗಾಂಧಿ ಪ್ರಧಾನಿ ಮತ್ತು ವಿಶ್ವನಾಥ್ ಪ್ರತಾಪ್ ಸಿಂಗ್ ಹಣಕಾಸು ಸಚಿವರಾಗಿದ್ದಾಗ ಮೊದಲ ಬಾರಿಗೆ ಭಾರತದಲ್ಲಿ ಜಿಎಸ್`ಟಿ ಸುಧಾರಣೆಗಳು ಆರಂಭವಾದವು.

-1986ರಲ್ಲಿ ವಿ.ಪಿ. ಸಿಂಗ್ ಮಾಡಿಫೈಡ್ ವ್ಯಾಟ್ (MODVAT) ವ್ಯವಸ್ಥೆಯನ್ನ ಜಾರಿಗೊಳಿಸಿದರು. ಇದು ದೇಶದ ಏಕೈಕ ತೆರಿಗೆ ವ್ಯವಸ್ಥೆಯನ್ನು ಸ್ಥಾಪಿಸಿತು.

- ನೇರ ಮತ್ತು ಪರೋಕ್ಷ ತೆರಿಗೆ ಸುಧಾರಣೆಗಳನ್ನು ಸೂಚಿಸಲು ನೇಮಕವಾದ ರಾಜ ಚೈಲಿಯಾ ಕಮಿಟಿಯ ವರದಿಯನ್ನು ಮಂಡಿಸಿದ ಬಳಿಕ ಪಿ.ವಿ.ನರಸಿಂಹ ರಾವ್ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ರಾಜ್ಯದ ಮಟ್ಟದಲ್ಲಿ ಮೌಲ್ಯ ವರ್ಧಿತ ತೆರಿಗೆ ಕುರಿತು ಆರಂಭಿಕ ಚರ್ಚೆ ಆರಂಭಿಸಿದರು.

- 2000ನೇ ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ ಯಶವಂತ್ ಸಿನ್ಹಾ ಹಣಕಾಸು ಸಚಿವರಾಗಿದ್ದರು. ಈ ಸಂದರ್ಭ ರಾಜ್ಯಗಳ ನಡುವೆ ಮಾರಾಟ ತೆರಿಗೆ ಸಂಘರ್ಷ  ತೆಗೆದುಹಾಕಲು ಮತ್ತು ವಿವಿಧ ಸರಕುಗಳ ಮಾರಾಟ ತೆರಿಗೆಗೆ ಏಕರೂಪದ ದರವನ್ನು ನಿರ್ವಹಿಸಲು ನಿರ್ಧರಿಸಲಾಯಿತು. ಏಕರೂಪ ತೆರಿಗೆ ಅನುಷ್ಠಾನ ಮೇಲ್ವಿಚಾರಣೆಗಾಗಿ ಸಿನ್ಹಾ, ರಾಜ್ಯ ಹಣಕಾಸು ಮಂತ್ರಿಗಳ ಸಮಿತಿ ರಚಿಸಿದ್ದರು,

-2004ರಲ್ಲಿ ಹಣಕಾಸು ಸಚಿವಾಲಯದ ಸಲಹೆಗಾರರಾಗಿದ್ದ ವಿಜಯ್ ಎಲ್ ಕೆಲ್ಕರ್ ನೇತೃತ್ವ ವಹಿಸಿದ್ದ ಟಾಸ್ಕ್ ಫೋರ್ಸ್ ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ತೆರಿಗೆ ವ್ಯವಸ್ಥೆಯಲ್ಲಿ ಅನೇಕ ನ್ಯೂನತೆಗಳಿರುವುದನ್ನ ಪತ್ತೆ ಹಚ್ಚಿತ್ತು. ದೇಶದ ಹಿತದೃಷ್ಟಿಯಿಂದ ಸಮಗ್ರ ಜಿಎಸ್`ಟಿಗೆ ಸಲಹೆ ನೀಡಿದ್ದರು.ಜೊತೆ ಜೊತೆಗೆ ರಾಜ್ಯದಿಂದಶೆ.7ರಷ್ಟು ಮತ್ತು ಕೇಂದ್ರದಿಂದ ಶೇ. 5ರಷ್ಟು ತೆರಿಗೆ ವಿಧಿಸಲು ಸೂಚಿಸಿತು.

-2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಜಿಎಸ್`ಟಿ ಕೆಲಸವನ್ನ ಮುಂದುವರೆಸಿತು. ರಾಜ್ಯಗಳಿಗೆ ಹಣಕಾಸು ನೆರವು ನೀಡಲು ಪ್ರಧಾನಿ ಸಿಂಗ್ ಮತ್ತು ಹಣಕಾಸು ಸಚಿವ ಚಿದಂಬರಂ ವ್ಯಾಟ್ ಪರಿಚಯಿಸಿದರು.

-ಪ್ರತೀ ಬಜೆಟ್`ನಲ್ಲೂ ಚಿದಂಬರಂ ಜಿಎಸ್`ಟಿ ಬಗ್ಗೆ ಭಾಷಣ ಮಾಡುತ್ತಿದ್ದರು. ಏಪ್ರಿಲ್ 2010ರಂದು ಜಿಎಸ್`ಟಿ ಜಾರಿ ದಿನಾಂಕ ಘೋಷಿಸದರೂ ಸಾಧ್ಯವಾಗಲಿಲ್ಲ.

- 2009 ರಲ್ಲಿ ಸಚಿವ ಪ್ರಣಬ್ ಮುಖರ್ಜಿ ಅವರು ಜಿಎಸ್ಟಿ ಮೂಲಭೂತ ರಚನೆಯನ್ನು ಘೋಷಿಸಿದರು ಮತ್ತು 2010 ರ ಎಪ್ರಿಲ್ 1 ರಿಂದ ಜಾರಿಗೊಳಿಸುವ ಸರ್ಕಾರದ ಗುರಿ ಪುನರುಚ್ಚರಿಸಿದರು.

- 2011 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಲೋಕಸಭೆಯಲ್ಲಿ ಜಿಎಸ್ಟಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಚಯಿಸಿತು.ಪ್ರತಿಪಕ್ಷ ಬಿಜೆಪಿ ಬಲವಾಗಿ ವಿರೋಧಿಸಿತ್ತು.

-ಬಳಿಕ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ನೇತೃತ್ವದ ಸಂಸತ್ತಿನ ಸ್ಥಾಯಿ ಸಮಿತಿಗೆ ಈ ಮಸೂದೆಯನ್ನು ಕಳುಹಿಸಲಾಯಿತು. 2012 ರಲ್ಲಿ ಸ್ಥಾಯಿ ಸಮಿತಿಯು ಇದನ್ನು ಚರ್ಚಿಸಿ ಕೆಲವು ಭಾಗಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಿತು. ಬಳಿಕ ಹಣಕಾಸು ಸಚಿವ ಚಿದಂಬರಂ ಜೊತೆ ಚರ್ಚಿಸಿ ಸಮಸ್ಯೆಗಳನ್ನ ಪರಹರಿಸಲು ಡಿಸೆಂಬರ್ 31, 2012 ರ ಗಡುವು ವಿಧಿಸಲಾಯ್ತು. ಆಗಸ್ಟ್ 2013ರಲ್ಲಿ ಸಮಿತಿ ವರದಿ ಸಲ್ಲಿಸಿತು. ಆಗಲೂ ಪ್ರತಿಪಕ್ಷ ಬಿಜೆಪಿ ಜಿಎಸ್`ಟಿಯನ್ನ ವಿರೋಧಿಸಿತ್ತು.
-ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಅವರ ಹಣಕಾಸು ಸಚಿವ ಸೌರಭ್ ಪಟೇಲ್ ವ್ಯಾಪಕ ವಿರೋಧ ವ್ಯಕ್ತಪಡಿಸಿದರು. ಜಿಎಸ್ಟಿಯಿಂದ ಗುಜರಾತ್ ಸರ್ಕಾರಕ್ಕೆ ಪ್ರತೀ ವರ್ಷ 14 ಸಾವಿರ ಕೋಟಿ ರೂ. ಹೊರೆಯಾಗುತ್ತೆಂದು ವಾದಿಸಿದ್ದರು.

-2014ರಲ್ಲಿ ಸರ್ಕಾರ ಬದಲಾದ ಬಳಿಕ ಎನ್`ಡಿಎ ಹಣಕಾಸು ಸಚಿವ ಅರುಣ್ ಜೇಟ್ಲಿ ಡಿಸೆಂಬರ್`ನಲ್ಲಿ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದರು. ಜಿಎಸ್`ಟಿ  ಬಿಲ್ ಅನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು.

-ಮೇ 2015ರಲ್ಲಿ ಲೋಕಸಭೆ ಜಿಎಸ್ಟಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು, ಆದರೆ,  ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಸ್ಥಗಿತಗೊಳಿಸಲಾಯಿತು. ಜಿಎಸ್ಟಿ ದರವನ್ನು ಬಹಿರಂಗವಾಗಿ ವಿರೋಧಿಸಿದ್ದ ಕಾಂಗ್ರೆಸ್ ಶೆ. 18 ಮೀರಬಾರದೆಂದು ಒತ್ತಾಯಿಸಿತು.

-ಭಾರೀ ವಿರೋಧದ ನಡುವೆಯೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಾಲ್ಕು ತಿದ್ದುಪಡಿ ಮಸೂದೆಯಲ್ಲಿ ಮಂಡಿಸಿತು. ಹಲವು ರಾಜ್ಯಗಳ ವಿರೋಧದ ನಡುವೆಯೂ ಸಂಸತ್ತಿನ ಉಭಯ ಸದನಗಳಲ್ಲೂ ಬಿಲ್ ಅನುಮೋದನೆ ಪಡೆದು ಜಾರಿಗೆ ತರಲಾಗಿದ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ