ಪಾಕಿಸ್ತಾನ ಮೂಲದ 51 ವರ್ಷ ವಯಸ್ಸಿನ ಅಸಾದುಲ್ಲಾಖಾನ್, ಪುತ್ರಿ ಲಾರಿಬ್ ಮನೆತನದ ಗೌರವಕ್ಕೆ ಧಕ್ಕೆ ತರುತ್ತಿದ್ದಾಳೆ ಎಂದು ಆಕ್ರೋಶಗೊಂಡು ಆಕೆಯನ್ನು ಹತ್ಯೆಗೈದಿದ್ದಾನೆ. ಅಸಾದುಲ್ಲಾಖಾನ್ ಪತ್ನಿ ಶಾಜಿಯಾ ಕೂಡಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ.
ಪುತ್ರಿ ಲಾರಿಬ್ ಮುಸ್ಲಿಂ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದನ್ನು ಸಹಿಸದೆ ಆಕೆಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಸಾದುಲ್ಲಾಖಾನ್ ಪತ್ನಿ ಶಾಜಿಯಾ ಕೂಡಾ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿ, ಪುತ್ರಿಯನ್ನು ಜೀವಂತವಾಗಿಡಲು ತುಂಬಾ ಪ್ರಯತ್ನಿಸಿದೆ. ಆದರೆ, ಬಾಯ್ಫ್ರೆಂಡ್ನೊಂದಿಗೆ ಸೆಕ್ಸ್ ಮುಂದುವರಿಸುವುದಾಗಿ ಹಟ ಹಿಡಿದಿದ್ದರಿಂದ ಅನಿವಾರ್ಯವಾಗಿ ಹತ್ಯೆ ಮಾಡಬೇಕಾಯಿತು ಎಂದು ತಿಳಿಸಿದ್ದಾಳೆ.