ಸ್ವಚ್ಛತೆಗಾಗಿ ಪ್ರತಿ ಗ್ರಾಮಕ್ಕೆ ವಾರ್ಷಿಕ 20 ಲಕ್ಷ ರೂ. ಅನುದಾನ ಘೋಷಣೆ

ಗುರುವಾರ, 2 ಅಕ್ಟೋಬರ್ 2014 (15:22 IST)
ಗಾಂಧಿ ಜಯಂತಿಯ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಗಳಿಗೆಯಲ್ಲೇ  ಸ್ವಚ್ಛತೆಗಾಗಿ ಪ್ರತಿ ಗ್ರಾಮಕ್ಕೆ ವಾರ್ಷಿಕ 20 ಲಕ್ಷ ರೂ. ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸಿದೆ.  ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಪ್ರಕಟಣೆ ನೀಡಿದ್ದಾರೆ.  ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಈ ಅನುದಾನವನ್ನು ಬಳಸಬೇಕೆಂದು ಗಡ್ಕರಿ ಹೇಳಿದರು.

ದೇಶದ ಎಲ್ಲಾ ಗ್ರಾಮಗಳಿಗೂ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ನುಡಿದರು. 2019 ಅಕ್ಟೋಬರ್ 2ರೊಳಗೆ ಸ್ವಚ್ಛ ಭಾರತ ಗುರಿಯನ್ನು ಸಾಧಿಸಲು ಗಡ್ಕರಿ ಈ ನಿರ್ಧಾರ ಕೈಗೊಂಡರು.ಸ್ವಚ್ಛ ಭಾರತ ಅಭಿಯಾನ ಬರೀ ಸರ್ಕಾರದ ಕಾರ್ಯಕ್ರಮವಲ್ಲ.

ಅದನ್ನು ಯಶಸ್ವಿಯಾಗಿಸಲು ಪ್ರತಿಯೊಬ್ಬ ಭಾರತೀಯನ ಪಾಲ್ಗೊಳ್ಳುವಿಕೆ  ಅವಶ್ಯಕ. ಸ್ವಚ್ಛತಾ ಉದ್ದೇಶಕ್ಕೆ ಮಂಜೂರಾಜ ಹಣವನ್ನು ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಇರಿಸಲಾಗುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ತಾಜ್ಯ ಬಳಕೆಗೆ ಉನ್ನತ ತಂತ್ರಜ್ಞಾನ ಅಳವಡಿಸಲಾಗುತ್ತದೆ ಎಂದು ನುಡಿದರು. 

ವೆಬ್ದುನಿಯಾವನ್ನು ಓದಿ