ಮದುವೆಯಾಗುವ ಆಮಿಷ ಒಡ್ಡಿ ಯುವತಿಯ ಮೇಲೆ ಅತ್ಯಾಚಾರ

ಬುಧವಾರ, 27 ಆಗಸ್ಟ್ 2014 (15:10 IST)
ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಯುವಕನೊಬ್ಬ ಸತತ ಮೂರು ವರ್ಷಗಳಿಂದ ಅತ್ಯಾಚಾರ ನಡೆಸಿದ್ದಾನೆ ಎಂದು 25 ವರ್ಷದ ಯುವತಿಯೋರ್ವಳು ಆಪಾದಿಸಿದ ಘಟನೆ ರಾಜಸ್ಥಾನದ ಕರ್ತಾರಪುರದಲ್ಲಿ ನಡೆದಿದೆ. 

ಮಹೇಶ್ ನಗರ್ ಪೋಲಿಸ್ ಠಾಣೆಯಲ್ಲಿ ಪೀಡಿತೆ ನೀಡಿದ ದೂರಿನನ್ವಯ ವಿಚಾರಣೆ ನಡೆಸಿದ ಕೋರ್ಟ್ ನೀಡಿದ ನಿರ್ದೇಶನದಂತೆ ಪೋಲಿಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
 
ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಸುರೇಂದ್ರ ಗಥಾಲಾ(27) ಎಂಬಾತ ಕಳೆದ 2011 ರಿಂದ ತನ್ನ  ಮನೆಯಲ್ಲಿಯೇ ಮತ್ತು ಹೊಟೆಲ್ ಒಂದರಲ್ಲಿ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ.  ಆತನ ಈ ಕೃತ್ಯದ ಪರಿಣಾಮ 2013ರಲ್ಲಿ ನಾನು ಗರ್ಭವನ್ನು ಕೂಡ ಧರಿಸಿದ್ದೆ ಎಂದು ಯುವತಿ ಆರೋಪಿಸಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಪರಾರಿಯಾಗಿರುವ ಆರೋಪಿಯನ್ನು ಪೋಲಿಸರು ಹುಡುಕಾಡುತ್ತಿದ್ದು, ಆತನ ಮೇಲೆ ಐಪಿಸಿಯ ವಿವಿಧ ವಿಭಾಗಗಳಡಿ  ಪ್ರಕರಣವನ್ನು ದಾಖಲಿಸಲಾಗಿದೆ.  ಪೀಡಿತಳ ಹೇಳಿಕೆಯನ್ನು ಇನ್ನೂ ದಾಖಲಿಸಿಕೊಳ್ಳಬೇಕಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ