28 ರಂದು ಹುಬ್ಬಳ್ಳಿಯಲ್ಲಿ ಮೋದಿ ಸಮಾವೇಶ: ವೈವಿಧ್ಯಮಯ ಪ್ರಚಾರ

ಶನಿವಾರ, 22 ಫೆಬ್ರವರಿ 2014 (11:20 IST)
PR
ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಅಲ್ಲಲ್ಲಿ ಮೋದಿ ಟೀ ಸ್ಟಾಲ್ಗಳನ್ನು ಸ್ಥಾಪಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅದರ ಬೆನ್ನಲ್ಲೆ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಆಹ್ವಾನಿಸಿ `ಭಾರತ ಗೆಲ್ಲಿಸಿ' ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ.

ಈಗಾಗಲೇ ನರೇಂದ್ರ ಮೋದಿ ಅವರು ಮಂಗಳೂರು-ದಾವಣಗೆರೆಯಲ್ಲಿ ಆಯೋಜಿಸಿದ 'ಭಾರತ ಗೆಲ್ಲಿಸಿ' ಅಭಿಯಾನದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದಾರೆ. ಅದೇ ರೀತಿ ಉತ್ತರ ಕರ್ನಾಟಕದ ಭಾಗದಲ್ಲೂ ಕೂಡಾ ಮೋದಿ ಅಲೆಯನ್ನು ವ್ಯಾಪಕವಾಗಿ ಹೆಚ್ಚಿಸಲು ರಾಜ್ಯ ಬಿಜೆಪಿ ಇದೇ ದಿನಾಂಕ 28ಕ್ಕೆ ದಿನ ನಿಗದಿ ಮಾಡಿಕೊಂಡಿದೆ.

ಫೆಬ್ರವರಿ 28ರಂದು ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಿ, 'ಭಾರತ ಗೆಲ್ಲಿಸಿ' ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಹುಬ್ಬಳ್ಳಿ ಮತ್ತು ಗುಲಬರ್ಗಾದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಹುಬ್ಬಳ್ಳಿಯ ಕುಸಗಲ್ ರಸ್ತೆಯ ಆಕ್ಸ್ ಪರ್ಡ ಕಾಲೇಜ್ ಬಳಿಯಿರುವ ಸುಮಾರು ಅರವತ್ತು ಎಕರೆ ವಿಶಾಲ ಮೈದಾನದಲ್ಲಿ ಈ ಬೃಹತ್ ಸಮಾವೇಶ ಜರುಗಲಿದೆ.

ಹುಬ್ಬಳ್ಳಿ ಸುತ್ತಮುತ್ತಲಿನ ಜಿಲ್ಲೆಯ ಬಿಜೆಪಿ ಘಟಕದ ಎಲ್ಲ ಪದಾಧಿಕಾರಿಗಳ ಜೊತೆ ಬಿಜೆಪಿ ಮುಖಂಡರು ನಿರಂತರ ಸಂಪರ್ಕದಲ್ಲಿದ್ದು, ಅಭಿಯಾನದ ಪ್ರಚಾರಕ್ಕೆ ಹಾಗೂ ಅದರ ಯಶಸ್ಸಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈಗಾಗಲೇ ಸಮಾವೇಶದ ಕುರಿತಾದ ಬೃಹತ್ ಕಟೌಟ್ಗಳು, ಬ್ಯಾನರ್ಗಳು ನಗರದಲ್ಲೆಲ್ಲ ರಾಜಾಜಿಸುತ್ತಿದೆ. ಸಮಾವೇಶಕ್ಕೆ ಬರುವವರಿಗೆ ಸ್ವಾಗತ ಕೋರಲು, ಸಭೆ ಜರುಗುವ ಸ್ಥಳದಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಬೃಹತ್ ಬಲೂನ್ನನ್ನು ಕಟ್ಟಲಾಗಿದೆ.

ವೆಬ್ದುನಿಯಾವನ್ನು ಓದಿ