2G ಹಗರಣ : ಕೋರ್ಟನಲ್ಲಿ ಉಲ್ಟಾ ಹೊಡೆದ ಅಂಬಾನಿ.

ಗುರುವಾರ, 22 ಆಗಸ್ಟ್ 2013 (19:04 IST)
PTI
PTI
"ಸ್ವಾನ್ ಟೆಲಿಕಾಂ ಸಂಸ್ಥೆ ನನಗೆ ಗೊತ್ತೇ ಇಲ್ಲ. ಆ ಹೆಸರನ್ನೂ ನಾನು ಕೇಳಿಲ್ಲ" ಎಂದು ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಅಂಬಾನಿ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದಾರೆ

ಹಾಜರಾತಿ ವಿನಾಯತಿಯನ್ನು ಕೋರಿ ಅಂಬಾನಿ ಸಲ್ಲಿಸಿದ್ದ ಅರ್ಜಿಯನ್ನು ನೆನ್ನೆ ಸುಪ್ರೀಂ ಕೋರ್ಟ ವಜಾಮಾಡಿತ್ತು. ಹೀಗಾಗಿ ಇಂದು ಪ್ರಾಸಿಕ್ಯೂಷನ್ ಪರವಾಗಿ ಅನಿಲ್ ಅಂಬಾನಿ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು.

ಅನಿಲ್ ಅಂಬಾನಿ ಗ್ರೂಪ್‌ ಗೆ ಸೇರಿದ ಸ್ವಾನ್ ಟೆಲಿಕಾಂ ಸಂಸ್ಥೆ ತರಂಗಾಂತರ ಹಂಚಿಕೆಯಲ್ಲಿ ಅರ್ಹತೆಯನ್ನು ಪಡೆದಿರಲಿಲ್ಲ ಎಂದು ಸಿಬಿಐ ಹೇಳಿತ್ತು.

ಟೆಲಿಕಾಂ ಸ್ಪೆಕ್ಟ್ರಂ ಮತ್ತು 2008 ರ ಲೈಸನ್ಸ್‌ ವಿಚಾರಕ್ಕೆ ಸಂಬಂದಿಸಿದಂತೆ ನ್ಯಾಯಾಧೀಶರು ಪ್ರೆಶ್ನೆ ಕೇಳಿದಾಗ "ಸ್ವಾನ್ ಸಂಸ್ಥೆಯ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆದರೆ ದೂರ ಸಂಪರ್ಕ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ದಿವಂಗತ ಪ್ರಮೋದ್‌ ಮಹಾಜನ್‌, ಎ ರಾಜಾ, ಕಪಿಲ್ ಸಿಬಲ್‌ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾರೆ.

ನಾಳೆ ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ ಕೂಡ ನ್ಯಾಯಾಲಯಕ್ಕೆ ಹಾಜರಾಗಲಿದ್ದು ಅವರು 2 ಜಿ ಹಂಚಿಕೆಯ ಹಗರಣಕ್ಕೆ ಸಂಬಂದಿಸಿದಂತೆ ಏನು ಹೇಳಲಿದ್ದಾರೆ ಎಂಬುದು ಸದ್ಯದ ಕುತೂಹಲ

ವೆಬ್ದುನಿಯಾವನ್ನು ಓದಿ