ಅಮಿತ್ ಶಾಗೆ ಬರೆದ ಪತ್ರಕ್ಕೆ ಮೂವರು ಸಚಿವರು ಅಭಿನಂದಿಸಿದ್ದಾರೆ: ಶಾಂತಕುಮಾರ್

ಗುರುವಾರ, 23 ಜುಲೈ 2015 (15:07 IST)
ಬಿಜೆಪಿ ಹೈಕಮಾಂಡ್ ವಿರುದ್ಧ ಪತ್ರ ಬರೆದು ಕೋಲಾಹಲ ಸೃಷ್ಟಿಸಿದ್ದ ಶಾಂತ ಕುಮಾರ್ ಶಾಂತವಾಗುವಂತೆ ಕಾಣುತ್ತಿಲ್ಲ. ನಾನು ಬರೆದ ಪತ್ರಕ್ಕೆ ಬಿಜೆಪಿಯ ಮೂವರು ಸಚಿವರು ಅಭಿನಂದಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್, ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭೇಟಿಯಾದ ಮೂವರು ಸಚಿವರು ನಾನು ತೆಗೆದುಕೊಂಡ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ವ್ಯಾಪಂ, ಲಲಿತ್‌ಗೇಟ್ ಮತ್ತು ಮಹಾರಾಷ್ಟ್ರ ಸಚಿವರ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
 
ವ್ಯಾಪಂ ಹಗರಣ ಬಿಜೆಪಿ ನಾಕರ ತಲೆ ತಗ್ಗಿಸುವಂತೆ ಮಾಡಿದೆ. ಹಗರಣದಲ್ಲಿ ಭಾಗಿಯಾದವರ ಬಗ್ಗೆ ಕ್ರಮ ಕೈಗೊಳ್ಳಲು ಪಕ್ಷದಲ್ಲಿ ಅಂತರಿಕ ಲೋಕಪಾಲ ಸಮಿತಿ ರಚಿಸಬೇಕು. ಬಿಜೆಪಿಯ ಮೂವರು ಸಚಿವರು ಕೂಡಾ ಅದೇ ಭಾವನೆಗಳನ್ನು ವ್ಯಕ್ತಪಡಿಸಿ ಆದರೆ ನಾವು ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹತಾಶೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. 
 
ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿ ಯಾವುದೇ ಹೇಳಿಕೆಯನ್ನು ನೀಡುವ ಮುನ್ನ ನಾಯಕರನ್ನು ಸಂಪರ್ಕಿಸುವುದು ಕಡ್ಡಾಯ ಎಂದು ಹೇಳಿದ ನಂತರ, ಇದೀಗ ಮೋದಿ ಆದೇಶವನ್ನು ಉಲ್ಲಂಘಿಸಿ ಶಾಂತಕುಮಾರ್ ಹೇಳಿಕೆ ನೀಡಿರುವುದು ಬಿಜೆಪಿ ನಾಯಕರಲ್ಲಿ ಭಿನ್ನಮತ ಉಲ್ಬಣಿಸಿದಂತಾಗಿದೆ. 

ವೆಬ್ದುನಿಯಾವನ್ನು ಓದಿ