ಮಗುವಿನ ಮೇಲೆ ಅತ್ಯಾಚಾರವೆಸಗಿ ತಲೆಕೆಳಗೆ ಮಾಡಿ ನೇತು ಹಾಕಿದ

ಶನಿವಾರ, 31 ಜನವರಿ 2015 (12:55 IST)
ಇದೊಂದು ಪೈಶಾಚಿಕ ಕೃತ್ಯ. ಬಿಹಾರದ ಧುಬನಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಕಠಿಣ ಹೃದಯಿಗಳ ಕಣ್ಣಲ್ಲೂ ನೀರು ತರಿಸುವಂತಿದೆ. ಮೂರು ವರ್ಷದ ಪುಟ್ಟ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬ ಆಕೆಯನ್ನು ನಗ್ನಳಾಗಿಸಿ ಮರವೊಂದಕ್ಕೆ ತಲೆಕೆಳಗೆ ಮಾಡಿ ಕಟ್ಟಿ ಹಾಕಿದ್ದಾನೆ. 
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು ಶುಕ್ರವಾರ ಮುಂಜಾನೆ ಮಗುವಿನ ಪರಿವಾರದವರಿಗೆ ವಿಷಯ ಗೊತ್ತಾಗಿದೆ. ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಪ್ರಾರಂಭಿಸಲಾಗಿದೆ. 
 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ  ಮಗುವಿನ ಅಜ್ಜಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಓಡಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮಗುವನ್ನು ಆಟವಾಡಿಸುವ ನೆಪದಲ್ಲಿ ಎತ್ತಿಕೊಂಡು ಪರಾರಿಯಾಗಿದ್ದಾನೆ. ನಂತರ ಆಕೆಯನ್ನು ಉದ್ಯಾನವನವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ದುಷ್ಕರ್ಮವನ್ನು ನಡೆಸಿದ ನಂತರ ಬಾಲಕಿಯ ಬಟ್ಟೆಯನ್ನು ಬಿಚ್ಚಿ ಬೆತ್ತಲೆಯಾಗಿಸಿ ಮರವೊಂದರ ಕೊಂಬೆಗೆ ತಲೆಕೆಳಗೆ ಮಾಡಿ ನೇತು ಹಾಕಿ ಪೈಶಾಚಿಕ ವಿಕೃತೆಯನ್ನು ಮೆರೆದಿದ್ದಾನೆ. ದೊಡ್ಡವಯಸ್ಸಿನವರು ಸಹ ತಡೆಯಲಾಗದ ಚಳಿಯಲ್ಲಿ, ಕತ್ತಲೆ ರಾತ್ರಿಯಲ್ಲಿ ಮಗು ರಾತ್ರಿ ಪೂರ್ತಿ ನಡುಗಿದೆ.  
 
ಮಗುವಿನ ಮನೆಯವರು ಬಾಲಕಿಗಾಗಿ ರಾತ್ರಿಯೆಲ್ಲಾ ಶೋಧ ನಡೆಸಿದ್ದಾರೆ. ಆದರೆ ಶುಕ್ರವಾರ ಬೆಳಿಗ್ಗೆ ಮಗು ಪತ್ತೆಯಾಗಿದೆ. 

ವೆಬ್ದುನಿಯಾವನ್ನು ಓದಿ