3000 ಪೋರ್ನ್ ವೆಬ್ ಸೈಟ್`ಗಳನ್ನ ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ

ಗುರುವಾರ, 30 ಮಾರ್ಚ್ 2017 (09:19 IST)
ಪೋರ್ನೋಗ್ರಫಿ ಕಂಟೆಂಟ್ ಒಳಗೊಂಡಿದ್ದ 3000 ವೆಬ್`ಸೈಟ್`ಗಳಿಗೆ ಬ್ರೇಕ್ ಬಿದ್ದಿದೆ. ಭಾರತದಲ್ಲಿ ಈ ವೆಬ್ ಸೈಟ್`ಗಲನ್ನ ಬ್ಲಾಕ್ ಮಾಡಿರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
 

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ನೀಡಿರುವ ಲಿಖಿತ ಮಾಹಿತಿಯಲ್ಲಿ` ವಿದೇಶದಿಂದ ನಿರ್ವಹಿಸಲಾಗುತ್ತಿದ್ದ ಚೈಲ್ಡ್ ಪೋರ್ನೋಗ್ರಫಿ ವಿಷಯಗಳನ್ನ ಹೊಂದಿದ್ದ ಜಾಲತಾಣಗಳನ್ನ ಬಂದ್ ಮಾಡಿರುವುದಾಗಿ ತಿಳಿಸಿದೆ.

ಇದೇವೇಳೆ,ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳ ತಡೆ ಕಾಯ್ದೆಯಡಿ ಗೃಹ ಸಚಿವಾಲಯ ಕ್ರಮ ಜರುಗಿಸುತ್ತಿದೆ ಎಂದೂ ಲೋಕಸಭೆಗೆ ಮಾಹಿತಿ ಒದಗಿಸಲಾಗಿದೆ. ಇದೇವೇಳೆ, ಇಂಟರ್ ಪೋಲ್ ಸಹ ಅಧಿಕ ಸೆಕ್ಸ್ ಕಂಟೆಂಟ್ ಇರುವ ಜಾಲತಾಣಗಳ ಲಿಸ್ಟ್ ಮಾಡುತ್ತಿದ್ದು, ಸಿಬಿಐಗೆ ಮಾಹಿತಿ ನೀಡಲಾಗುತ್ತದೆ. ಇದರ ಆಧಾರದ ಮೇಲೆ ಕೇಂದ್ರ ಸರ್ಕಾರ ವೆಬ್ ಸೈಟ್`ಗಳನ್ನ ಬ್ಲಾಕ್ ಮಾಡಲಿದೆ ಎಂದು ಸಚಿವಾಲಯ ತಿಳಿಸಿದೆ.

ವೆಬ್ದುನಿಯಾವನ್ನು ಓದಿ