ಆಂಧ್ರದಲ್ಲಿ ಭೀಕರ ರೈಲು ಅಪಘಾತ; 32 ಸಾವು

ಭಾನುವಾರ, 22 ಜನವರಿ 2017 (12:41 IST)
ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಕೂನೇರು ರೈಲು ನಿಲ್ದಾಣದ ಸಮೀಪ ಶನಿವಾರ ರಾತ್ರಿ ಜಗದಲ್‌‌ಪುರ್‌ ಮತ್ತು ಭುವನೇಶ್ವರ್‌ ಮಧ್ಯೆ ಸಂಚರಿಸುತ್ತಿದ್ದ ಹರಿಖಂಡ್‌ ಎಕ್ಸ್‌‌ಪ್ರೆಸ್‌‌ ಅಪಘಾತಕ್ಕೀಡಾಗಿದ್ದು, ಬರೊಬ್ಬರಿ 32 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 
ಹಿರಾಖಂಡ್ ಎಕ್ಸಪ್ರೆಸ್ ರೈಲು ಭುವನೇಶ್ವರಿಂದ ಜಗದಲ್ಪುರದ ಕಡೆ ಸಾಗುತ್ತಿತ್ತು. ರಾತ್ರಿ 11ರ ಸುಮಾರಿಗೆ ರೈಲಿನ 11 ಬೋಗಿಗಳು ಹಳಿ ತಪ್ಪಿವೆ ಎಂದು ಒಡಿಶಾ ಡಿಜಿಪಿ ಕೆ.ಬಿ. ಸಿಂಗ್ ಹೇಳಿದ್ದಾರೆ.
 
ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 
 
ರೈಲು ದುರಂತ ಸಂಬಂಧ ಕೇಂದ್ರ ರೈಲ್ವೇ ಇಲಾಖೆ ಪರಿಹಾರ ಘೋಷಣೆ ಮಾಡಿದ್ದು ಮೃತರ ಕುಟುಂಬಕ್ಕೆ ತಲಾ 2 ಲಕ್ಷ , ಗಂಭೀರ ಗಾಯಾಳುಗಳಿಗೆ 50 ಮತ್ತು ಅಲ್ಪ ಪ್ರಮಾಣದ ಗಾಯಗಳಾಗಿರುವವರಿಗೆ ತಲಾ 25 ಸಾವಿರ ರೂಪಾಯಿ ಘೋಷಿಸಲಾಗಿದೆ. 
 
ಅಪಘಾತದ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಶಂಕೆಯನ್ನು ರೈಲ್ವೆ ಇಲಾಖೆ ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ