ಮಂಗಳ ಗ್ರಹ ತಲುಪಲು ಇನ್ನು 33 ದಿನಗಳು ಮಾತ್ರ ಬಾಕಿ

ಶನಿವಾರ, 23 ಆಗಸ್ಟ್ 2014 (18:01 IST)
ಭಾರತದ ಮಹತ್ವಾಕಾಂಕ್ಷಿ ಮಂಗಳ ಯಾತ್ರೆ ಯೋಜನೆ ಕೆಂಪು ಗ್ರಹದಿಂದ ಕೇವಲ 9 ದಶಲಕ್ಷ ಕಿಮೀ ದೂರವಿದ್ದು, ಭೂಮಿಯಿಂದ 189 ದಶಲಕ್ಷ ಕಿ.ಮೀ. ದೂರ ತಲುಪಿದೆ ಮತ್ತು ಮಂಗಳ ಗ್ರಹ ತಲುಪಲು ಇನ್ನೂ 33 ದಿನಗಳು ಹಿಡಿಯಲಿದೆ ಎಂದು ಇಸ್ರೋ ಸಾಮಾಜಿಕ ಜಾಲ ತಾಣದಲ್ಲಿ ತಿಳಿಸಿದೆ.

 ಬಾಹ್ಯಾಕಾಶ ನೌಕೆ ಸರಿಯಾದ ಪಥದಲ್ಲಿರುವುದರಿಂದ ಆಗಸ್ಟ್‌ನಲ್ಲಿ ಯೋಜಿಸಲಾಗಿದ್ದ ಪಥ ಸರಿಪಡಿಸುವ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಲು ಅಲ್ಲಗಳೆದಿದ್ದಾರೆ.

 ಮಹತ್ವಾಕಾಂಕ್ಷಿ ಮಂಗಳ ಯಾತ್ರೆ ಯೋಜನೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವೀಕೃತ ಉಪಗ್ರಹ ಉಡಾವಣೆ ವಾಹನದ ಮೂಲಕ ಕಳೆದ ವರ್ಷ ನವೆಂಬರ್ 5ರಂದು ಆರಂಭಿಸಲಾಯಿತು. ಕೆಂಪು ಗ್ರಹದ ವಾತಾವರಣವನ್ನು ಸೆಪ್ಟೆಂಬರ್ 24ರಂದು ಮುಟ್ಟುವುದು ಅದರ ಗುರಿಯಾಗಿತ್ತು. 

ವೆಬ್ದುನಿಯಾವನ್ನು ಓದಿ