ಹಳಿ ತಪ್ಪಿದ ಚೆನ್ನೈ-ಮಂಗಳೂರು ಎಕ್ಸ್​ಪ್ರೆಸ್ ರೈಲು

ಶುಕ್ರವಾರ, 4 ಸೆಪ್ಟಂಬರ್ 2015 (10:18 IST)
ತಮಿಳುನಾಡಿನ ವೃದ್ಧಾಚಲಂನ ಪೂವನೂರ್ ನಿಲ್ದಾಣದ ಬಳಿ ಚೆನ್ನೈ -ಮಂಗಳೂರು (ನಂ 16859) ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು ಇಂದು ನಸುಕಿನ ವೇಳೆ ಹಳಿ ತಪ್ಪಿದ್ದು ಪ್ರಾಥಮಿಕ ಮಾಹಿತಿಗಳ ಪ್ರಕಾರ 35 ಮಂದಿ ಗಾಯಗೊಂಡಿದ್ದಾರೆ.
ಗುರುವಾರ- ಶುಕ್ರವಾರದ ನಡುವಿನ ತಡರಾತ್ರಿ 2 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
 
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಗಾಯಗೊಂಡವರನ್ನು ವೃದ್ದಾಚಲಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಈ ಘಟನೆಯಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹಾಗಾಗಿ ಚೆನ್ನೈ ಆಗಮಿಸುವ ರೈಲುಗಳನ್ನು ತಂಜಾವೂರು ಮತ್ತು ಕುಂಭಕೋಣಂ ಮಾರ್ಗದಲ್ಲಿ ಚಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಧುರೈ ರೈಲ್ವೆ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
 
ಈ ದುರ್ಘಟನೆಯ ಹಿನ್ನೆಲೆಯಲ್ಲಿ ದಕ್ಷಿಣದ ಕಡೆಯಿಂದ ಚೆನ್ನೈಗೆ ಬರುವ ಎಲ್ಲಾ ರೈಲುಗಳನ್ನು ತಾಂಜಾವೂರ್ ಮತ್ತು ಕುಂಬಕೋಣಂ ಮಾರ್ಗವಾಗಿ ಚಲಿಸುವಂತೆ ನಿರ್ದೇಶಿಸಲಾಗಿದೆ. 

ವೆಬ್ದುನಿಯಾವನ್ನು ಓದಿ