ಪ.ಬಂಗಾಳ ಚುನಾವಣೆ: ಐದನೇ ಹಂತದಲ್ಲಿ 43 ಕೋಟ್ಯಾಧಿಪತಿಗಳು, 67 ಅಪರಾಧಿಗಳು ಕಣದಲ್ಲಿ

ಬುಧವಾರ, 27 ಏಪ್ರಿಲ್ 2016 (12:20 IST)
ಪಶ್ಚಿಮ ಬಂಗಾಳದ ಐದನೇ ಹಂತದ ಚುನಾವಣೆಯಲ್ಲಿ 43 ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದು, 67 ಅಭ್ಯರ್ಥಿಗಳು ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ ಎಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ.
 
ಐದನೇ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ 349 ಅಭ್ಯರ್ಥಿಗಳ ಪೈಕಿ 43 ಅಭ್ಯರ್ಥಿಗಳು ತಮ್ಮ ಆಸ್ತಿ 1 ಕೋಟಿ ರೂ.ಹೆಚ್ಚಿರುವುದಾಗಿ ಘೋಷಿಸಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಂಸ್ಥೆ ತಿಳಿಸಿದೆ.
 
43 ಕೋಟ್ಯಾಧಿಪತಿ ಅಭ್ಯರ್ಥಿಗಳಲ್ಲಿ 23 ಅಭ್ಯರ್ಥಿಗಳು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದು ಒಂಬತ್ತು ಅಭ್ಯರ್ಥಿಗಳು ಬಿಜೆಪಿ ಮತ್ತು ಮೂರು ಅಭ್ಯರ್ಥಿಗಳು ಕಾಂಗ್ರೆಸ್ ಹಾಗೂ ಆರು ಅಭ್ಯರ್ಥಿಗಳು ಸಿಪಿಎಂ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ.
 
ಬಿಜೆಪಿಯ 53 ಅಭ್ಯರ್ಥಿಗಳಲ್ಲಿ 10 ಅಭ್ಯರ್ಥಿಗಳು, ಎಐಟಿಸಿ ಪಕ್ಷ 17 ಅಭ್ಯರ್ಥಿಗಳು, ಸಿಪಿಎಂ ಪಕ್ಷದ 31 ಅಭ್ಯರ್ಥಿಗಳು, ಎಸ್‌ಯುಸಿಐ ಪಕ್ಷದ 6 ಅಭ್ಯರ್ಥಿಗಳು, ಕಾಂಗ್ರೆಸ್ ಪಕ್ಷದ ಏಳು ಅಭ್ಯರ್ಥಿಗಳಉ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣೆ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ
 
ಕೋಲ್ಕತಾ ಪೋರ್ಟ್, ಜಂಗೀಪೂರಾ, ಕಾಕ್‌ದ್ವೀಪ್, ರೈಡಿಘಿ ಮತ್ತು ಸಿಂಗೂರ್ ಕ್ಷೇತ್ರಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ.  

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ