5 ವರ್ಷಗಳಿಂದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ತಂದೆಗೆ 16 ವರ್ಷ ಶಿಕ್ಷೆ

ಶನಿವಾರ, 5 ಏಪ್ರಿಲ್ 2014 (14:01 IST)
ಕಳೆದ ಐದು ವರ್ಷಗಳಿಂದ ಪುತ್ರಿಯ ಮೇಲೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಅತ್ಯಾಚಾರವೆಸಗಿದ ಆರೋಪಿ ಕಾಮುಕ ತಂದೆಗೆ ನ್ಯಾಯಾಲಯ 16 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.

ಕ್ರೀಡಾವಸ್ತುಗಳ ಮಾರಾಟದ ಮಳಿಗೆಯನ್ನು ಹೊಂದಿದ್ದ ಆರೋಪಿ ಎಂ.ಶಿವಕುಮಾರ್ 9ನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿಯ ಮೇಲೆ ಕಳೆದ 2007ರಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಒಂದು ದಿನ ತಂಪು ಪಾನೀಯದಲ್ಲಿ ಮತ್ತೇರುವ ಔಷಧಿ ಬೆರಿಸಿ ಅತ್ಯಾಚಾರವೆಸಗಿದ್ದಾನೆ. 2010 ರಲ್ಲಿ ಸಿನೆಮಾ ತೋರಿಸಲು ಕರೆದುಕೊಂಡು ಥಿಯೇಟರ್‌ನಲ್ಲಿಯೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಒಂದು ವೇಳೆ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವ ಬೆದರಿಕೆಯೊಡ್ಡಿದ್ದಾನೆ.

ಮತ್ತೊಂದು ಬಾರಿ ಯುವತಿಯ ತಾಯಿ ಹೊರಗಡೆ ಹೋಗಿದ್ದಾಗ ಕೂಡಾ ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ತಾಯಿ ಮನೆಗೆ ಬಂದ ನಂತರ ತಂದೆಯ ಬಗ್ಗೆ ಮಾಹಿತಿ ನೀಡಿದ್ದಾಳೆ.

ಕುಟುಂಬದ ಹೊರಗಡೆ ಬಾಯಿ ಬಿಟ್ಟಲ್ಲಿ ಸಂಪೂರ್ಣ ಕುಟುಂಬವನ್ನು ಹತ್ಯೆ ಮಾಡುವುದಾಗಿ ಆರೋಪಿ ತಂದೆ

ಕಳೆದ 2011 ರಲ್ಲಿ ಪುತ್ರಿ ಕಾಲೇಜಿಗೆ ಸೇರಿದ ನಂತರ ಕೂಡಾ ಆರೋಪಿ ಅತ್ಯಾಚಾರ ಮುಂದುವರಿಸಿದ್ದಾನೆ. ತಂದೆಯ ಕಿರುಕುಳ ತಾಳದೆ ಒಂದು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ತಂದೆಯ ವರ್ತನೆಯ ಬಗ್ಗೆ ಕಿರಿಯ ಸಹೋದರಿಗೆ ತಿಳಿಸಿದ್ದಾಳೆ.ಕಿರಿಯ ಸಹೋದರಿಗೆ ಕೂಡಾ ಲೈಂಗಿಕ ಕಿರುಕುಳ ನೀಡಿದ್ದರಿಂದ ಇಬ್ಬರು ಜೊತೆಯಾಗಿ ತಂದೆಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಅತ್ಯಾಚಾರ ತಂದೆಯ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ,ಜೀವಬೆದರಿಕೆ, ವಂಚನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದರು.

ನ್ಯಾಯಾಲಯ ಆರೋಪಿ ಶಿವಕುಮಾರ್‌ಗೆ 16 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದಲ್ಲದೇ 25 ಸಾವಿರ ರೂಪಾಯಿ ದಂಡವನ್ನು ಪಾವತಿಸುವಂತೆ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ