15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ 50 ವರ್ಷದ ಆರೋಪಿಯ ಬಂಧನ

ಸೋಮವಾರ, 1 ಫೆಬ್ರವರಿ 2016 (17:40 IST)
15 ವರ್ಷದ ಬಾಲಕಿಯ ಮೇಲೆ 50 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಹೇಯ ಘಟನೆ ಸರ್ದಾನಾ ಪಟ್ಟಣದಿಂದ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಐದು ಮಕ್ಕಳ ತಂದೆಯಾದ 50 ವರ್ಷದ ವ್ಯಕ್ತಿಯೊಬ್ಬ, ಬಾಲಕಿಯ ಸಹೋದರರನ್ನು ಸಿಹಿ ತಿಂಡಿ ತರಲು ಕಳುಹಿಸಿ ನಂತರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರ ನಡೆದ ಘಟನೆಯ ಬಗ್ಗೆ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
 
ಆರೋಪಿ, ಪ್ರತಿನಿತ್ಯ ಮನೆಗೆ ಬಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಹಣದ ಆಮಿಷ ತೋರಿಸಿ ಆಕೆಯ ಸಹೋದರರನ್ನು ತನ್ನ ಕಡೆಗೆ ವಾಲಿಸಿಕೊಂಡಿದ್ದಲ್ಲದೇ ಅವರಿಗಾಗಿ ಹಣವನ್ನು ಖರ್ಚು ಮಾಡುತ್ತಿದ್ದನು ಎನ್ನಲಾಗಿದೆ.
 
ಆದರೆ, ಆರೋಪಿಯ ಒಳಸಂಚು ಅರಿಯದ ಕುಟುಂಬದ ಸದಸ್ಯರು ಕೂಡಾ ಆತನಿಗೆ ಗೌರವ ಕೊಡುತ್ತಿದ್ದರು. ಆದರೆ, ಬಾಲಕಿಯನ್ನು ಹೇಗಾದರೂ ಮಾಡಿ ರೇಪ್ ಮಾಡಬೇಕು ಎನ್ನುವ ಉದ್ದೇಶದಿಂದ ಬಾಲಕಿಯನ್ನು ಓಲೈಸಿಕೊಳ್ಳಲು ಪ್ರಯತ್ನಿಸುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆದರೆ ಬಾಲಕಿ, ಆರೋಪಿಯ ಆತನ ಸಂಚಿಗೆ ಒಳಗಾಗದಿದ್ದರಿಂದ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ, ಆರೋಪಿ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ