ಸೈಕಲ್- ಹೊಲಿಗೆ ಯಂತ್ರ ನಡೆಸುತ್ತಿರುವ 100 ವರ್ಷಕ್ಕಿಂತ ಹಿರಿಯ ಮಹಿಳೆಯರು

ಬುಧವಾರ, 30 ಜುಲೈ 2014 (18:51 IST)
ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಛತ್ತಿಸಘಡ್‌ದಲ್ಲಿ 100, 200 ಮತ್ತು 500 ವರ್ಷದ ಮಹಿಳೆಯರು ಸೈಕಲ್‌ ಮತ್ತು ಹೊಲಿಗೆ ಯಂತ್ರ ನಡೆಸುತ್ತಿದ್ದಾರೆ. ನಿಜವೋ ಗೊತ್ತಿಲ್ಲ ಆದರೆ ಸರ್ಕಾರಿ ಕಾಗದಗಳಲ್ಲಿ ಈ ರೀತಿ ಇದೆ. 
 
ಮುಖ್ಯಮಂತ್ರಿಯವರು ಹೊಲಿಗೆ ಯಂತ್ರ ಮತ್ತು ಸೈಕಲ್‌ ಸಹಾಯ ನೀಡಿದವರ ವಿವರಗಳನ್ನು ಪರಿಶೀಲಿಸಿದಾಗ, 100 ಮತ್ತು 200 ವರ್ಷಕ್ಕಿಂತ ಹಿರಿಯ ಮಹಿಳೆಯರು ಮತ್ತು ಅತಿ ಹಿರಿಯಳು ಎಂದರೆ 532 ವರ್ಷದ ಮಹಿಳೆ ಕೂಡ ಸರಕಾರಿ ಸೌಲಭ್ಯಗಳನ್ನು ಪಡೆದಿದ್ದಾರೆ ಎಂದು ಕಾರ್ಮಿಕ ಇಲಾಖೆಗೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾದ ವಿವರಗಳಿಗೆ ಉತ್ತರಿಸಿದೆ. 
 
ಇದು ತಪ್ಪಿನಿಂದಾಗಿದೆಯೋ ಅಥವಾ ಅವ್ಯವಹಾರ ನಡೆದಿದೆಯೋ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಆದರೆ ಇಲಾಖೆಯಿಂದ ನೀಡಿರುವ ಪಟ್ಟಿಯ ತನಿಖೆ ಅವಶ್ಯಕತೆಯಾಗಿದೆ. ಇದರಲ್ಲಿ ಕೆಲವು ನಿಯಮ ಬಾಹಿರ ಹೆಸರುಗಳಿದ್ದು  ಈ ಯೋಜನೆಯ ಲಾಭ ಸರಿಯಾದ ಫಲಾನುಭವಿಗಳಿಗೆ ಸಿಕ್ಕಿದೆಯೋ ಇಲ್ಲವೋ ಎನ್ನುವ  ಅನುಮಾನ ಜನತೆಯನ್ನು ಕಾಡುತ್ತಿದೆ. ಸರಕಾರ ಈ ಯೋಜನೆಗೆ ಇಲ್ಲಿಯವರೆಗೆ 40 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. 
 
 ಕಳೆದ ವರ್ಷ ವಿಧಾನಸಭೆ ಚುನಾವಣೆಗಿಂತ ಮೊದಲು ಅಸಂಘಟಿತ ಕ್ಷೇತ್ರದ ಮಹಿಳಾ ಕಾರ್ಮಿಕರಿಗೆ ನೆರವು ಒದಗಿಸಲು ಸೈಕಲ್‌ ಮತ್ತು ಹೊಲಿಗೆ ಯಂತ್ರ ಹಂಚುವ ಯೋಜನೆ ಜಾರಿಗೊಳಿಸಲಾಗಿತ್ತು. ವರದಿಯ ಪ್ರಕಾರ ಈ ಯೋಜನೆಯ ಲಾಭ 1.15 ಲಕ್ಷ ಮಹಿಳೆಯರಿಗೆ ಲಭಿಸಿದೆ. 
 
ಸೈಕಲ್‌ ಯೋಜನೆ 18 ರಿಂದ 35 ವರ್ಷ ಮತ್ತು ಹೊಲಿಗೆ ಯಂತ್ರ ಯೋಜನೆ 35 ರಿಂದ 60 ವರ್ಷದವರಿಗೆ ದೊರೆಯಬೇಕಾಗಿತ್ತು. ಆರ್‌ಟಿಐ ಮಾಹಿತಿಯಿಂದ ಈ ಯೋಜನೆಯಲ್ಲಿ ವಯೋಮಿತಿಯ ಪಾಲನೆ ಉಲ್ಲಂಘಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರ್‌ಟಿಐ ಮೂಲಗಳು ತಿಳಿಸಿವೆ. 
 
ರಾಯಪುರ್‌ನಲ್ಲಿ 19399 ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಸಂಜೀವ್‌ ಅಗರ್‌ವಾಲ್‌‌‌ ಅವರ ಆರ್‌ಟಿಐ ಮನವಿ ಮೇರೆಗೆ ಇಲಾಖೆ ಉತ್ತರ ನೀಡಿದೆ. 
 
ಇದರಲ್ಲಿ 6189 ಮಹಿಳೆಯರ ವಯಸ್ಸು 114 ವರ್ಷ ಎಂದು ದಾಖಲಾಗಿದೆ. 6 ಮಹಿಳೆಯರ ವಯಸ್ಸು 202 ವರ್ಷವಿದೆ, 3 ಮಹಿಳೆಯರ ವಯಸ್ಸು 212 ಮತ್ತು ಇಬ್ಬರು ಮಹಿಳೆಯರ ವಯಸ್ಸು 282 ಎಂದು ದಾಖಲಾಗಿದೆ. 14 ಮಹಿಳೆಯರ ವಯಸ್ಸು 300 ವರ್ಷಕ್ಕಿಂತ ಮೆಲ್ಪಟ್ಟಿದೆ, 7 ಮಹಿಳೆಯರ ವಯಸ್ಸು 400ಕ್ಕಿಂತ ಹೆಚ್ಚಿಗಿದೆ. ಒಬ್ಬ ಮಹಿಳೆಗೆ ಕೇವಲ 532 ವರ್ಷಗಳಾಗಿವೆ.
 
ಅಗರ್‌‌ವಾಲ್‌ ಪ್ರಕಾರ, ಈ ಮಾಹಿತಿ ಒಂದು ದೊಡ್ಡ ತಪ್ಪಿನ  ಸಣ್ಣ ಭಾಗವಾಗಿದೆ ಏಕೆಂದರೆ ಈ ವರದಿ ಕೇವಲ ರಾಯಪುರ್‌ ಕ್ಷೇತ್ರದ್ದಾಗಿದೆ. ಇತರ ಕ್ಷೇತ್ರಗಳಲ್ಲಿ ಇನ್ನು ಹೇಗಿದೆಯೋ ? ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. 
 
ಇಂತಹ ತಪ್ಪುಗಳು ಸಾಫ್ಟ್‌ವೇರ್‌‌ ತೊಂದರೆಯಿಂದಾಗುತ್ತವೆ ಎಂದು ಕಾರ್ಮಿಕ ಇಲಾಖೆಯ ಉಪ ಆಯುಕ್ತೆ ಸವಿತಾ ಮಿಶ್ರಾ ತಿಳಿಸಿದ್ದಾರೆ. ಯೋಜನೆಯಲ್ಲಿ ಕಂಡು ಬಂದ ದೋಷಗಳ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಲಾಗುವುದು ಎಂದು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ