6 ತಿಂಗಳುಗಳ ಕಾಲ ಮಗನ ಹೆಣದ ಮೇಲೆ ಮಲಗಿದ್ದ ಅಪ್ಪ!

ಮಂಗಳವಾರ, 24 ಡಿಸೆಂಬರ್ 2013 (17:26 IST)
PR
ಬೆಲಹಿಯಾ ಗ್ರಾಮದ ನಿವಾಸಿ ಚಂದ್ರಪಾಲ್‌ ಯಾದವ್‌ ರವರ ಮಗ 2013ರ ಜನೆವರಿ 14 ರಂದು ಕಾಣೆಯಾಗಿದ್ದನು. ಮಗನು ಕಾಣೆಯಾದ ಬಗ್ಗೆ 2013 ಫೆಬ್ರವರಿ 12 ರಂದು ಪೋಲಿಸ್‌ರಿಗೆ ದೂರು ಕೂಡ ನೀಡಲಾಗಿತ್ತು. ಸಾಕಷ್ಟು ಹುಡುಕಾಟ ನಡೆಸಿದರೂ ಮಗನ ಸುಳಿವು ಸಿಗಲಿಲ್ಲ. ಆದರೆ ತಾನು ಮಲಗುತ್ತಿದ್ದ ಸ್ಥಳದಲ್ಲಿಯೇ ದುಷ್ಕರ್ಮಿಗಳು ಮಗನನ್ನು ಹತ್ಯೆ ಮಾಡಿ ಹೂತಿದ್ದಾರೆ ಎನ್ನುವ ಕರುಣಾಜನಕ ಕಥೆ ತಂದೆಗಾದರೂ ಹೇಗೆ ಗೊತ್ತಾದಿತು?

PR
ಪೋಲಿಸರು ಕೂಡ ಸಾಕಷ್ಟು ಹುಡುಕಾಟ ನಡೆಸಿದರು, ಆದರು ಮಗನ ಪತ್ತೆಯಾಗಲಿಲ್ಲ. ವಯಸ್ಸಾದ ತಂದೆ ತಾಯಿ ಪೋಲಿಸರಿಗೆ ಮಗನ ಹುಡುಕಿ ಕೊಡುವಂತೆ ಒತ್ತಾಯಿಸಿದ್ದರು, ಪೋಲಿಸರು ಕೂಡ ಮಗನನ್ನು ಹುಡುಕಿ ಕೊಡುವ ಭರವಸೆ ನೀಡಿದರು ಜೊತೆಗೆ ಕ್ರೈಂ ಬ್ರ್ಯಾಂಚ್‌ ಕೂಡ ಸಹಾಯ ಮಾಡಿತು

ಚಂದ್ರಪಾಲ ಯಾದವ ಬಹಳಷ್ಟು ಬಡವರಾಗಿದ್ದರು . ಜೂನ್‌ ತಿಂಗಳಲ್ಲಿ ಮಳೆ ಹೆಚ್ಚಿದ ಕಾರಣ ಮನೆಯಲ್ಲಿ ನೀರು ಬಂದಿತ್ತು. ಇದರಿಂದ ಮನೆಯ ನೀರು ಹೊರಗಡೆ ಹಾಕಲು ಪ್ರಾರಂಭಿಸಿದರು.ಮಳೆ ನೀರಿನಿಂದಾಗಿ ಕೋಣೆಯ ನೆಲ ಕೆಸರಿನಿಂದ ತುಂಬಿದ್ದರಿಂದ ಮನೆಯಲ್ಲಿನ ಗುದ್ದಲಿಯಿಂದ ಸರಿಪಡಿಸಲು ಕೆದರುತ್ತಿರುವಾಗ ನೆಲದ ಅಡಿಯಲ್ಲಿ ತನ್ನ ಮಗನ ಕಾಲನ್ನು ನೋಡಿ ಗಾಬರಿಯಾದನು. ಮತ್ತಷ್ಟು ಕೆದರಲು ಪ್ರಾರಂಭಿಸಿದಾಗ ಮಗನ ಶವ ಪತ್ತೆಯಾಗಿತ್ತು. ನಂತರ ಚಂದ್ರಪಾಲ್‌ ಸುತ್ತ ಮುತ್ತಲಿನ ಜನರಿಗೆ ಕರೆದರು. ತಾನು ಮಲಗುವ ಸ್ಥಳದಲ್ಲಿಯೇ ಮಗನ ಶವ ದೊರಕಿದ್ದು ಕಂಡು ತಂದೆ ಆಘಾತಗೊಂಡಿದ್ದನು. ಅಚ್ಚರಿಯ ಸಂಗತಿಯೆಂದರೆ ಸುಮಾರು 6 ತಿಂಗಳುಗಳ ಕಾಲ ಮಗನ ಶವದ ಮೇಲೆಯೇ ತಂದೆ ಮಲಗಿದ್ದನು.

PR
ಪೋಲಿಸರು ಬಂದು ತನಿಖೆ ಮಾಡಲು ಸಿದ್ದರಾದರು, ಈ ಸಮಯದಲ್ಲಿ ಶವದ ಜೋತೆಗೆ ಒಂದು ದುಪ್ಪಟ್ಟಾ ಸಿಕ್ಕಿತ್ತು. ಇತನನ್ನು ಕೊಲೆ ಮಾಡಲಾಗಿದೆ ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿ ಶವವನ್ನು ಪೋಸ್ಟ್‌ಮಾರ್ಟಂ‌ಗೆ ಕಳುಹಿಸಲಾಯಿತು. ಅಲ್ಲಿಯ ವರದಿ ಪ್ರಕಾರ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂತು. ಆದರೆ ಈ ಕೊಲೆ ಯಾರಿಂದ ಆಗಿದೆ ಎಂದು ತಿಳಿಯಲಿಲ್ಲ. ಆತನ ತಂದೆಯ ಮೇಲೆ ಶಂಕೆ ವ್ಯಕ್ತ ಪಡಿಸಲಾಯಿತು, ಆತನ ಸಾವಿಗೆ ಕಾರಣವಂತು ತಿಳಿದು ಬಂದಿರಲಿಲ್ಲ. ಇವರಿಗೆ ಯಾರು ಶತ್ರುಗಳು ಇರಲಿಲ್ಲ. ಯಾರಮೇಲು ಅನುಮಾನಪಡುವ ಸ್ಥಿತಿಯಲ್ಲಿರಲಿಲ್ಲ.

ಶವದ ಜೊತೆಗಿದ್ದ ದುಪಟ್ಟಾದಿಂದ ಪೋಲಿಸರು ಹಂತಕನ ಹುಡುಕಾಟಕ್ಕೆ ಸಜ್ಜಾದರು. ಇದರ ಹಿಂದೆ ಬಿಹಾರ್ ಮೂಲದ ಮಹಿಳೆಯೊಬ್ಬಳು ಇದ್ದಾಳೆ ಎಂದು ಪೋಲಿಸರು ಶಂಕೆ ವ್ಯಕ್ತ ಪಡಿಸಿದರು. ರೇಖಾ ಎನ್ನುವ ಹುಡುಗಿ ಮೊದಲು ಇವರ ಮನೆಯಲ್ಲಿ ಇದ್ದಳು , ಆದರೆ ಈಗ ಅಣ್ಣನ ಜೊತೆಗೆ ಅಂಬಾಲಾಗೆ ಹೊಗಿದ್ದಳು. ಆದರೆ ಅಂಬಾಲಾದಲ್ಲು ಕೂಡ ಅವಳು ಸಿಗಲಿಲ್ಲ. ರೇಖಾ ಸಿಗದಿದ್ದಾಗ ಪೋಲಿಸರು ರೇಖಾಳ ಮೇಲೆ ಹೆಚ್ಚಿನ ಶಂಕೆ ವ್ಯಕ್ತ ಪಡಿಸಿದರು.

PR
ಚಂದ್ರಪಾಲ್‌ರ ಒಬ್ಬ ಸಂಬಂಧಿ ದಿನೇಶ್ ಕುಮಾರ್ ಅಮ್ಬಾಲಾದಲ್ಲಿ ತನ್ನ ಅಳಿಯ ಸಂತೋಷನ ಜೊತೆಗೆ ಇರುತ್ತಿದ್ದನು, ದಿನೇಶ ಕುಮಾರ ರೇಖಾಳ ಅಣ್ಣನಾಗಿದ್ದನು. ಈ ಮೂಲಕ ರೇಖಾರ ಕುಟುಂಬ ಚಂದ್ರಪಾಲ್‌ರಿಗೆ ಹೆಚ್ಚು ಹತ್ತಿರವಾದರು. ಇದಾದ ನಂತರ ದಿನೇಶ ರೇಖಾಳ ಅಣ್ಣನ ಎದುರು ಸಂತೋಷರ ಮಗ ರಾಮ ಕುಮಾರ ರೇಖಾಳನ್ನು ಮದುವೆಯಾಗಬೇಕು ಇಚ್ಛಿಸಿದ್ದಾನೆ ಎಂದು ಹೇಳಿದರು . ರೇಖಾಳ ಅಣ್ಣ ಕೂಡ ಈ ಸಂಬಂಧ ಒಪ್ಪಿಗೆ ಸೂಚಿಸಿದನು. ರೇಖಾ ಕೂಡ ಕೆಲವು ದಿನಗಳ ಕಾಲ ಸಂತೋಷನ ಮನೆಯಲ್ಲಿ ಇದ್ದಳು.ಸಂತೋಷನ ಪತ್ನಿ ರೇಖಾಳನ್ನು ರಾಮಕುಮಾರ ಮನೆಗೆ ಕಳುಹಿಸಿದಳು. ರೇಖಾ ಮತ್ತು ರಾಮಕುಮಾರ ಮದುವೆ ನಿಶ್ಚಯವಾಯಿತು. ರೇಖಾಳ ಅಣ್ಣ ತಂಗಿಯನ್ನು ಬಿಟ್ಟು ಅಮ್ಬಾಲಕ್ಕೆ ಹೋದನು. ಆ ವೇಳೆ ದಿನೇಶನ ಅಳಿಯ ಸಂತೋಷ ಜತೆಗೆ ರೇಖಾ ದೈಹಿಕ ಸಂಪರ್ಕ ಶುರು ಹಚ್ಚಿಕೊಂಡಿದ್ದಳು.

ಸಂತೋಷನ ಹೆಂಡತಿಗೆ ರೇಖಾ ಮನೆಯಲ್ಲಿ ಇರುವುದು ಬೇಡವಾಗಿತ್ತು. ನಂತರ ರೇಖಾ, ರಾಮಕುಮಾರ ಮನೆಯಲ್ಲಿ ಇರಲು ಶುರು ಮಾಡಿದಳು ಮತ್ತು ರಾಮಕುಮಾರ ಮನೆಗೆ ಸಂತೋಷ ಯಾವಾಗಲು ಬಂದು ಹೋಗುತ್ತಿದ್ದ. ತನ್ನ ಭಾವಿ ಪತ್ನಿ ಸಂತೋಷನ ಜೊತೆಗೆ ಸರಸ ಸಲ್ಲಾಪದಲ್ಲಿರುವುದನ್ನು ನೋಡಿದ ಮತ್ತು ರೇಖಾಳ ಜತೆಗೆ ಮದುವೆ ಆಗುವುದಿಲ್ಲ ಎಂದು ತಿಳಿಸಿದನು. ಆದರೆ ರೇಖಾಳಿಗೆ ಎಲ್ಲಿ ಹೋಗಬೇಕು ಎಂದು ತಿಳಿಯಲಿಲ್ಲ. ಆಮೇಲೆ ಸಂತೋಷನ ಜೊತೆಗೂಡಿ ರಾಮ ಕುಮಾರ್‌ನ ಹತ್ಯೆಗಾಗಿ ಸಂಚು ರೂಪಿಸಿದಳು.

PR
14 ಜನೆವರಿ ರಾಮಕುಮಾರ್‌ನ ತಂದೆ ಹೊಲದಲ್ಲಿ ಮಲಗಲು ಹೋಗಿದ್ದರು ಮತ್ತು ಅಮ್ಮ ಹಾಲ್‌ನಲ್ಲಿ ಮಲಗಿದ್ದಳು. ಸಂತೋಷ ರೇಖಾಳ ಜೊತೆಗೆ ನಿಧಾನವಾಗಿ ಮನೆಯೊಳಗೆ ನುಗ್ಗಿ ರಾಮಕುಮಾರನ ಕೊಲೆ ಮಾಡಿದರು. ದುಪಟ್ಟಾ ಕುತ್ತಿಗೆಗೆ ಕಟ್ಟಿ ರಾಮಕುಮಾರನನ್ನು ಕೊಲ್ಲಲಾಯಿತು. ಕೋಣೆಯಲ್ಲಿ ಒಂದಿಷ್ಟು ತಗ್ಗು ಮಾಡಿ ರಾಮಕುಮಾರನನ್ನು ಹುಗಿದರು, ಯಾರಿಗೂ ಇದು ಗೊತ್ತಾಗಲಿಲ್ಲ. ಆ ಕೋಣೆಯಲ್ಲಿ ತಂದೆ ಚಂದ್ರ ಪಾಲ್‌ ಮಲಗುತ್ತಿದ್ದರು.

ಸಂತೋಷ ಮತ್ತು ದಿನೇಶನ ಹುಡುಕಾಟದಲ್ಲಿ ಪೋಲಿಸರು ಇದ್ದರು, 22 ಡಿಸೆಂಬರ್‌ 2013 ರಂದು ಪೋಲಿಸರು ಕೊಲೆಗಡುಕರನ್ನು ಬಂಧಿಸಿದರು.

ವೆಬ್ದುನಿಯಾವನ್ನು ಓದಿ