ಬೆಂಗಳೂರು: 64 ವರ್ಷದ ವೃದ್ಧನಿಂದ 6 ವರ್ಷದವಳಿಗೆ ಲೈಂಗಿಕ ಹಿಂಸೆ

ಶನಿವಾರ, 31 ಜನವರಿ 2015 (11:05 IST)
ಅಪ್ರಾಪ್ತ ವಯಸ್ಸಿನ ಬಾಲಕಿಗೆ 64 ವರ್ಷದ ವೃದ್ಧನೊಬ್ಬ ಲೈಂಗಿಕ ಶೋಷಣೆ ನೀಡಿದ ಘಟನೆ ಬೆಂಗಳೂರಿನ ಎಚ್ಎಸ್ಆರ್ ಲೇ ಔಟ್‌ನಲ್ಲಿ ನಡೆದಿದೆ. 
ಒಂದನೇ ತರಗತಿ ಓದುತ್ತಿರುವ ಬಾಲಕಿ ಜನವರಿ 27 ರಂದು ಬಾಲಕಿ ಸಿವಿಲ್ ಇಂಜಿನಿಯರ್ ಆಗಿರುವ ತಂದೆ ಮತ್ತು ಸಂಬಂಧಿಕರೊಂದಿಗೆ ಪೀಠೋಪರಕರಣಗಳ ಅಂಗಡಿಗೆ ಹೋಗಿದ್ದಳು. ಅಂಗಡಿಯನ್ನು ತಲುಪಿದ ಮೇಲೆ ಆಕೆಯ ತಂದೆ ಮಗಳನ್ನು ಬೀನ್ ಬ್ಯಾಗ್ ಒಂದರ ಮೇಲೆ ಕೂರಿಸಿ ತನ್ನ ಸಂಬಂಧಿಗೆ ಪೀಠೋಪಕರಣಗಳ ಆಯ್ಕೆಗೆ ಸಹಾಯ ಮಾಡಲೆಂದು  ತೆರಳಿದರು. ಆಗ ಬಾಲಕಿಯ ಬಳಿ ಬಂದ 64 ವರ್ಷದ  ಅಂಗಡಿ ಕೆಲಸಗಾರ ಬಾಷಾ  ಮಗುವನ್ನು ಸ್ವಲ್ಪ ಮರೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ನನ್ನನ್ನು ಬೇರೊಂದು ಕೋಣೆಗೆ ಕರೆದೊಯ್ದ ಅಂಕಲ್ ನನ್ನ ಗುಪ್ತಾಂಗಗಳನ್ನು ಮುಟ್ಟಿದ ಎಂದು ತನ್ನ ತಂದೆಯ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ. ವಿಷಯ ತಿಳಿದು ಆತಂಕಿತನಾದ ತಂದೆ ಬಾಷಾ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾನೆ. 
 
ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ