ದೇವಸ್ಥಾನದಲ್ಲಿ ಬಾಲಕಿ ಮೇಲೆ 68 ವರ್ಷದ ವೃದ್ಧನಿಂದ ರೇಪ್: 10 ವರ್ಷ ಜೈಲು

ಬುಧವಾರ, 1 ಏಪ್ರಿಲ್ 2015 (17:41 IST)
ದೇವಸ್ಧಾನವೊಂದರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ್ದ 68 ವರ್ಷದ ವೃದ್ಧನಿಗೆ ದೆಹಲಿ ಕೋರ್ಟ್ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದ್ದು, ಮಕ್ಕಳು ಸರ್ವೋಚ್ಚ ಮಹತ್ವದ ಆಸ್ತಿ ಎಂದು ಹೇಳಿದೆ. 

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ಪ್ರಕಾರ ಮಂಗೋಲ್ಪುರಿ ನಿವಾಸಿ ಜೈಪಾಲ್‌ನಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗೌತಮ್ ಮೆನನ್ ಅವರು 10 ವರ್ಷ ಶಿಕ್ಷೆಯನ್ನು ನೀಡಿದ್ದಾರೆ. 
 
"ಮಕ್ಕಳ ಕಲ್ಯಾಣ ಹಾಗೂ ಮಕ್ಕಳ ಯೋಗಕ್ಷೇಮ" ಪರಿಕಲ್ಪನೆ ಯಾವುದೇ ನಾಗರಿಕ ಸಮಾಜದ ಮೂಲ ಮತ್ತು ಇದು ನೇರವಾಗಿ  ಇಡೀ ಸಮುದಾಯದ ಸುಸ್ಥಿತಿ, ಅಭಿವೃದ್ಧಿ, ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಹೇಳಿದೆ. 
 
ಪುನಶ್ಚೇತನಕಾರಿಯಾಗಿ ಮತ್ತು ನ್ಯಾಯ ಒದಗಿಸಲು ಎಂಟು ವರ್ಷದ ಹುಡುಗಿಗೆ ಒಂದು ಲಕ್ಷ ರೂ ಪರಿಹಾರವನ್ನು ನ್ಯಾಯಾಲಯ ಘೋಷಿಸಿದೆ. ಈ ಹಣವನ್ನು ಮಗುವಿನ ಕಲ್ಯಾಣಕ್ಕೋಸ್ಕರ ಬಳಸಲು ಪೋಷಕರಿಗೆ ನೀಡಬೇಕು ಎಂದು ಉತ್ತರ ಜಿಲ್ಲೆಯ ದೆಹಲಿ  ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕೋರ್ಟ್ ನಿರ್ದೇಶಿಸಿದೆ.

ವೆಬ್ದುನಿಯಾವನ್ನು ಓದಿ