ಒಟ್ಟು 18 ಜನರಿದ್ದ ತಂಡದಲ್ಲಿ ನಾಲ್ವರು ಸೈನಿಕರು ಕಾಣೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ 6 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಒಬ್ಬ ಭಯೋತ್ಪಾದಕ ಸಹ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ನೀರು ತರಲೆಂದು ಹೊರಟಿದ್ದ ಸೈನಿಕರ ವಾಹನದ ಮೇಲೆ ನಾಗಲ್ಯಾಂಡ್ ರಾಜ್ಯದ ಚಂಗ್ಲಾಂಗ್ಸು ಪ್ರದೇಶದ ಕುಗ್ರಾಮವೊಂದರ ಬಾಂಬ್ ಸ್ಫೋಟಿಸಿದ ಉಗ್ರರು ನಂತರ ಗುಂಡಿನ ದಾಳಿಯನ್ನೂ ನಡೆಸಿದರು. ಪರಿಣಾಮ 8 ಜನ ಸೈನಿಕರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ. ರವಿವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ದುಷ್ಕೃತ್ಯವನ್ನೆಸಗಲಾಗಿದೆ. ಪ್ರತಿದಾಳಿಯಲ್ಲಿ ಒಬ್ಬ ಉಗ್ರ ಸಹ ಹತ್ಯೆಯಾಗಿದ್ದಾನೆ ಎಂದು ತಿಳಿದು ಬಂದಿದೆ.