2 ವರ್ಷಗಳ ಬಳಿಕ ಮತ್ತೆ ಅಮ್ಮನ ಮಡಿಲು ಸೇರಿದ 8ರ ಪೋರ

ಗುರುವಾರ, 30 ಅಕ್ಟೋಬರ್ 2014 (13:04 IST)
ಕಳೆದೆರಡು ವರ್ಷಗಳ ಹಿಂದೆ ಕಳೆದು ಹೋಗಿದ್ದ ಮಗುವೊಂದು ಮತ್ತೆ ಅಮ್ಮನ ಮಡಿಲು ಸೇರಿದ ಭಾವಪೂರ್ಣ ಸನ್ನಿವೇಶವೊಂದು  ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿರುವ  ಮಕ್ಕಳ ಸಹಾಯವಾಣಿ (1098)  ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಸೃಷ್ಟಿಯಾಯಿತು.  

ಕಳೆದ 2012ರ ಜುಲೈ ತಿಂಗಳ ಒಂದು ದಿನ ತನ್ನ ಊರಾದ  ಚಿರಕುಂಡಾ ( ಧಾನ್ಬಾದ್) ದಲ್ಲಿ ಆಕಸ್ಮಿಕವಾಗಿ ರೇಲ್ವೆಯನ್ನು ಹತ್ತಿದ್ದ 8 ರ ಪೋರ ಚೋಟು ಎರಡು ವರ್ಷಗಳ ತರುವಾಯ ತನ್ನ ತಂದೆತಾಯಗಳ ಜತೆ ಸೇರುವುದಕ್ಕೆ ಮಕ್ಕಳ ಸಹಾಯವಾಣಿ ಕೇಂದ್ರ ನೆರವಾಯಿತು.
 
ಹೆತ್ತ ಮಗನನ್ನು ಕಾಣದೇ ಪರಿತಪಿಸುತ್ತಿದ್ದ ತಾಯಿಯ ದಣಿವರಿಯದ ಹುಡುಕಾಟ ನಿನ್ನೆದಿನಕ್ಕೆ ಕೊನೆ ಕಂಡಿತು. ಈ ಸಮಯದಲ್ಲಿ ಪ್ರತಿಕ್ರಿಯಿಸದ ತಾಯಿ ಸಾಯಿರಾ "ಕೊನೆಗೂ ನನ್ನ ಮುದ್ದು ಮಗನ ಕೈಯನ್ನು ಹಿಡಿದಿದ್ದೇನೆ. ಕಾಯುವಿಕೆಯ ದುಃಖವನ್ನು ಮತ್ತು, ಈಗಿನ ಸಂತೋಷವನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ. ದೇವರು ಪ್ರಾರ್ಥನೆಗೆ ಕಿವಿಯಾಗುತ್ತಾನೆ ಎಂದಷ್ಟೇ ಹೇಳಬಲ್ಲೆ" ಎನ್ನುತ್ತಾರೆ ಅನಂದಭಾಷ್ಪದ ಜತೆ. 
 
ಮನೆಗೆ ಹಿಂತಿರುಗುವ ದಾರಿ ಕಾಣದೇ ಅಡ್ಡಾಡುತ್ತಿದ್ದ  ಬಾಲಕನನ್ನು ರಕ್ಷಿಸಿದ ಸಾದತ್‌ಗಂಜ್ ಠಾಣೆಯ ಪೊಲೀಸರು ಆತನನ್ನು ಬಾಲಮಂದಿರದಲ್ಲಿ ಇಟ್ಟಿದ್ದರು. ಆತನ ಮನೆಗೆ ತಲುಪಿಸಲು ಮಕ್ಕಳ ಸಹಾಯವಾಣಿಯವರು ಅವಿರತವಾಗಿ ಶರ್ಮ ಪಟ್ಟರು ಮತ್ತು ಕೊನೆಗೂ ಅದರಲ್ಲಿ ಯಶ ಕಂಡಿದ್ದಾರೆ. ಮನೆಗೆ ಹೋಗಲು ಪರಿತಪಿಸುತ್ತಿದ್ದ ಚೋಟು ಬಾಲಮಂದಿರದಿಂದ ತಪ್ಪಿಸಿಕೊಳ್ಳಲು ಪದೇ ಪದೇ ಪ್ರಯತ್ನಿಸುತ್ತಿದ್ದ ಎನ್ನುತ್ತಾರೆ ಸಹಾಯವಾಣಿ ತಂಡದ ಸದಸ್ಯರಲ್ಲೊಬ್ಬರಾದ ಅಮರೇಂದ್ರ. 

ವೆಬ್ದುನಿಯಾವನ್ನು ಓದಿ