ಗುಜರಾತಿನಲ್ಲೊಂದು ಮಕ್ಕಳಿಂದ,ಮಕ್ಕಳಿಗಾಗಿ ಆರಂಭವಾದ ಬ್ಯಾಂಕ್

ಶನಿವಾರ, 23 ಆಗಸ್ಟ್ 2014 (16:51 IST)
ಗುಜರಾತಿನ ಅಹಮದಾಬಾದಿನ ಜುಹಾಪುರದ ಬ್ಯಾಂಕೊಂದರ ಮುಂದೆ ಹಣವನ್ನು ತುಂಬಲು ಮಕ್ಕಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬರುತ್ತದೆ. ಅದು ಸಾರ್ಜನ್ ಬ್ಯಾಂಕ್.  ಮಕ್ಕಳಿಂದ ಸ್ಥಾಪಿತವಾದ , ಮಕ್ಕಳಿಂದ ನಡೆಸಲ್ಪಡುವ ಮತ್ತು ಮಕ್ಕಳಿಗಾಗಿ ಕಾರ್ಯನಿರ್ವಹಿಸುವ ಬ್ಯಾಂಕ್ ಅದು. ಇಲ್ಲಿ ಮಕ್ಕಳು ತಮ್ಮ ಅಪ್ಪ ಅಮ್ಮ ಖರ್ಚಿಗೆಂದು ಕೊಟ್ಟಿರುವ ಪಾಕೆಟ್ ಮನಿಯನ್ನು ಉಳಿತಾಯ ಮಾಡುತ್ತಾರೆ.

 
11 ವರ್ಷ ಪ್ರಾಯದ ಆಟೋ ರಿಕ್ಷಾ ಚಾಲಕನ ಮಗಳು ಈ ಬ್ಯಾಂಕಿನ ವ್ಯವಸ್ಥಾಪಕಿಯಾಗಿದ್ದಾಳೆ.  ಈ ಬ್ಯಾಂಕ್ ಬಡ ಮುಸ್ಲಿಂ ಸಮುದಾಯದ ಮಕ್ಕಳಿಗೆ ತಾವು  ಪಾಲಕರಿಂದ ಪಡೆದ ಪಾಕೆಟ್ ಮನಿಯನ್ನು ಸಂಕಷ್ಟದ ಸಮಯಗಳಿಗೆ ಬಳಸುವ ಉದ್ದೇಶದಿಂದ  ಉಳಿತಾಯ ಮಾಡಲು ಪ್ರೇರೇಪಿಸುತ್ತದೆ. ಬ್ಯಾಂಕಿನ ಖಜಾಂಚಿ ಅಮ್ರೀನ್ ಆಕೆಗಿಂತ ವಯಸ್ಸಿನಲ್ಲಿ ಸ್ವಲ್ಪ ಕಿರಿಯವನಾಗಿದ್ದಾನೆ. 
 
ಸ್ವಯಂಸೇವಾ ಸಂಸ್ಥೆ  ಸಾರ್ಜನ್ ಅಹಮದಾಬಾದಿನ ಜುಹಾಪುರ ಪ್ರದೇಶ (ಭಾರತದ ದೊಡ್ಡ ಮುಸ್ಲಿಂ ಗಲ್ಲಿ)ದ ಮಕ್ಕಳ ಜತೆ  ಕೆಲಸ ಮಾಡುತ್ತಿದ್ದು, ಈ ಬ್ಯಾಂಕ್ ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಹಣ ಉಳಿತಾಯ ಮಾಡುವ ಅವಶ್ಯಕತೆಯ ಅರಿವು ಮೂಡಿಸುವ ಪ್ರಯತ್ನವಾಗಿ ಬ್ಯಾಂಕ್ ಸ್ಥಾಪನೆಯ ಮಾರ್ಗವನ್ನು ಅನುಸರಿಸಿದೆ. 
 
ಬ್ಯಾಂಕ್ ಹಲವಾರು ವರುಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಯಶಸ್ಸನ್ನು ಕಾಣುತ್ತಿದೆ. 50 ಕ್ಕಿಂತ ಹೆಚ್ಚು ಖಾತೆಗಳು ನೋಂದಾಯಿಸ್ಪಟ್ಟಿದ್ದು, 19, 500 ರೂಪಾಯಿ ಜಮಾ ಆಗಿದೆ.ಇದು ಒಂದು ಸಣ್ಣ ಪ್ರಮಾಣದ ಮೊತ್ತವಾಗಿರಬಹುದು, ಆದರೆ ಗುಜರಾತಿನ ಸಾಮಾಜಿಕ-ನಗರ ಚಿತ್ರಣಕ್ಕೆ, ಇದು ನಿಜಕ್ಕೂ ಗಮನಾರ್ಹವಾದುದೇ ಆಗಿದೆ.

ವೆಬ್ದುನಿಯಾವನ್ನು ಓದಿ