ಭಿಕ್ಷುಕರಿಗಾಗಿ ಭಿಕ್ಷುಕರಿಂದಲೇ ಆರಂಭವಾದ ಬ್ಯಾಂಕ್

ಶನಿವಾರ, 28 ಮಾರ್ಚ್ 2015 (16:54 IST)
ಭಿಕ್ಷುಕರ ಗುಂಪೊಂದು ಭಿಕ್ಷುಕರಿಗಾಗಿಯೋ ತಮ್ಮ ಸ್ವಂತ ಬ್ಯಾಂಕೊಂದು ಆರಂಭಿಸಿದ್ದು, ಒಂದು ವೇಳೆ ಭಿಕ್ಷುಕರಿಗೆ ಆರ್ಥಿಕ ಸಮಸ್ಯೆ ಎದುರಾದಲ್ಲಿ ಬ್ಯಾಂಕ್ ಆರ್ಥಿಕ ನೆರವು ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.

ಭಿಕ್ಷುಕರಿಗಾಗಿಯೇ ನಾವು ಬ್ಯಾಂಕ್ ಸ್ಥಾಪಿಸಿರುವುದು ಸತ್ಯ ಸಂಗತಿ ಎಂದು ಬ್ಯಾಂಕ್‌ನ 40 ಭಿಕ್ಷುಕ ಸದಸ್ಯರಲ್ಲಿ ಒಬ್ಬರಾಗಿರುವ ರಾಜ್‌ಕುಮಾರ್ ಮಾಂಜಿ ತಿಳಿಸಿದ್ದಾರೆ.

ಬ್ಯಾಂಕ್‌ನಲ್ಲಿರುವ ಮ್ಯಾನೇಜರ್, ಖಜಾಂಚಿ ಮತ್ತು ಕಾರ್ಯದರ್ಶಿ ಮತ್ತು ಏಜೆಂಟ್ ಹಾಗೂ ಇತರ ಒಬ್ಬ ಸದಸ್ಯರು ಬ್ಯಾಂಕ್‌ ಮುನ್ನಡೆಸುತ್ತಿದ್ದು ಪ್ರತಿಯೊಬ್ಬರು ಭಿಕ್ಷುಕರಾಗಿದ್ದಾರೆ ಎಂದು ಮಾಂಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಿಕ್ಷುಕ ಮಾಂಜಿ ಸುಶಿಕ್ಷಿತನಾಗಿದ್ದು ಬ್ಯಾಂಕ್‌ನ ವ್ಯವಹಾರಗಳನ್ನು ಪರಿಶೀಲಿಸುವ ಅರ್ಹತೆಯನ್ನು ಹೊಂದಿದ್ದಾರೆ. ಪ್ರತಿದಿನ ಪ್ರತಿಯೊಬ್ಬ ಭಿಕ್ಷುಕ 210 ರೂಪಾಯಿಗಳನ್ನು ಬ್ಯಾಂಕ್‌ಗೆ ಠೇವಣಿ ಮಾಡುತ್ತಾನೆ. ಇದರಿಂದ ವಾರಕ್ಕೆ 899 ರೂಪಾಯಿಗಳ ಠೇವಣಿ ಜಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್‌ನ ಕಾರ್ಯದರ್ಶಿಯಾಗಿರುವ ಮಾಲತಿ ದೇವಿ ಮಾತನಾಡಿ, ಭಿಕ್ಷುಕರ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸುವ ಉದ್ದೇಶದಿಂದ ಬ್ಯಾಂಕ್ ತೆರೆಯಲಾಗಿದೆ. ನಾವು ಕಡು ಬಡವರಲ್ಲಿ ಕಡುಬಡವರಾಗಿದ್ದರಿಂದ ಸಮಾಜ ನಮ್ಮನ್ನು ಗೌರವಿಸುವುದಿಲ್ಲ. ಆದ್ದರಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬ್ಯಾಂಕ್ ತೆರೆಯಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸದಸ್ಯರನ್ನು ಹೊಂದುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್‌ನ ಸದಸ್ಯರಾಗಿರುವ ಬಹುತೇಕ ಭಿಕ್ಷುಕರು ಬಿಪಿಎಲ್ ಕಾರ್ಡ್ ಅಥವಾ ಆಧಾರ ಕಾರ್ಡ್ ಕೂಡಾ ಪಡೆದಿಲ್ಲ ಎಂದು ಹೇಳಿದ್ದಾರೆ.

ಪ್ರಸಕ್ತ ತಿಂಗಳ ಆರಂಭದಲ್ಲಿ ನನ್ನ ಮಗಳು ಮತ್ತು ಸಹೋದರಿ ಅಡುಗೆ ಮಾಡುವಾಗ ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡರು. ಬ್ಯಾಂಕ್ ನನಗೆ ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ 8000 ರೂಪಾಯಿಗಳ ಸಾಲವನ್ನು ನೀಡಿರುವುದು ಒಂದು ಉದಾಹರಣೆಯಾಗಿದೆ ಎಂದು ಭಿಕ್ಷುಕಿ ಮಾಲತಿ ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ