ಪಠಾನ್‌ಕೋಟ್: ಕೆನಾಲ್‌ನಲ್ಲಿ ಉಗ್ರರು ಎಸೆದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

ಸೋಮವಾರ, 1 ಫೆಬ್ರವರಿ 2016 (15:38 IST)
ಜಿಲ್ಲೆಯ ಮಲಿಕ್‌ಪುರ್ ಪಟ್ಟಣದ ಕೆನಾಲ್‌ನಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದು ಪೊಲೀಸರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
 
ಕಳೆದ ತಿಂಗಳು ವಾಯುನೆಲಯಲ್ಲಿ ನಡೆದ ಉಗ್ರರ ದಾಳಿಯ ನಂತರ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿತ್ತು. ಬರಿ ದೋಬ್ ಕೆನಾಲ್‌ನಲ್ಲಿ ಕೆಲ ಬಾಲಕರು ಸ್ನಾನ ಮಾಡುತ್ತಿರುವಾಗ, ನೀರು ತುಂಬಾ ಕಡಿಮೆಯಾಗಿದ್ದರಿಂದ ಕೆನಾಲ್ ತಳದಲ್ಲಿ ಶಸ್ತ್ರಾಸ್ತ್ರಗಳು ಕಾಣಿಸಿವೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.  
 
ಕೆನಾಲ್ ತಳದಲ್ಲಿ ಎಕೆ-47 ಗೆ ಸಂಬಂಧಿಸಿದ 59 ಜೀವಂತ ಗುಂಡುಗಳು, ಎರು ಮ್ಯಾಗ್‌ಜಿನ್ ಐಎನ್‌ಎಸ್‌ಎಎಸ್ ರೈಫಲ್‌ನ 29 ಗುಂಡುಗಳು,. 16 ಸುತ್ತಿನ ಶೆಲ್‌ಗಳು ಪತ್ತೆಯಾಗಿವೆ. 
 
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಮತ್ತೆ ಹೈ ಅಲರ್ಟ್ ಘೋಷಿಸಿ ಭಾರಿ ಬಂದೋಬಸ್ತ್ ಮಾಡಲಾಗಿದೆ.
 
ಕಳೆದ ಕೆಳ ದಿನಗಳ ಹಿಂದೆ ಪಂಜಾಬ್ ಪೊಲೀಸರು, ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ದೇಶಿಯ ರಿವಾಲ್ವರ್ ಮತ್ತು ಗುಂಡಿನ ಪ್ಯಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
 
ಜನೆವರಿ 28 ರಂದು ಪಠಾನ್‌ಕೋಟ್ ಕಂಟೋನ್ಮೆಂಟ್ ರೈಲಿವೆ ನಿಲ್ದಾಣಕ್ಕೆ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಅಫ್ಘಾನಿಸ್ತಾನದ ನಾಗರಿಕನೊಬ್ಬನನ್ನು ರೈಲ್ವೆ ಪೊಲೀಸರು ಬಂಧಿಸಿರುವುದನ್ನು ಸ್ಮರಿಸಬಹುದು. 

ವೆಬ್ದುನಿಯಾವನ್ನು ಓದಿ