ತಿರುಪತಿಗೆ ಹೋಗುವಾಗ ಆಧಾರ್ ಕಾರ್ಡ್ ಜತೆಗಿರಲಿ

ಗುರುವಾರ, 22 ಡಿಸೆಂಬರ್ 2016 (12:25 IST)
ನೀವು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕು ಎಂದುಕೊಂಡರೆ ಮೊದಲು ನಿಮ್ಮ ಆಧಾರ ಕಾರ್ಡ್‌ನ್ನು ಎತ್ತಿಟ್ಟುಕೊಳ್ಳಿ. ಇಲ್ಲವಾದರೆ ನಿಮಗೆ ತಿಮ್ಮಪ್ಪನ ವಿಶೇಷ ದರ್ಶನ ಸಿಗಲಾರದು.

ಹೌದು, ದಕ್ಷಿಣ ಭಾರತೀಯರ ಆರಾಧ್ಯ ದೈವ ವೆಂಕಟೇಶನ ವಿಶೇಷ ದರ್ಶನಕ್ಕೆ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸಲಾಗಿದೆ. ಟಿಟಿಡಿ ಒದಗಿಸುತ್ತಿರುವ ಸೇವೆಗಳಳ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮತ್ತು ಅಕ್ರಮಗಳಿಗೆ ತಡೆಯೊಡ್ಡಲು ದೇವಸ್ಥಾನದಲ್ಲಿ ನೀಡಲಾಗುವ ವಿವಿಧ ಸೇವೆಗಳಲ್ಲಿ ಆರ್ಧಾರ ಕಾರ್ಡ್‌ನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲವೆಂದಾದರೆ ಇತರ ಗುರುತಿನ ಚೀಟಿಯಾದರೂ ಇರಬೇಕು.
 
ಆಧಾರ್ ಕಾರ್ಡ್ ಇಲ್ಲದಿದ್ರೂ ದೇಗುಲ ಪ್ರವೇಶಿಸಲು ಅವಕಾಶವಿದೆ. ಆದ್ರೆ ಆಧಾರ್ ಕಾರ್ಡ್ ಅಥವಾ ಯಾವುದೇ ರೀತಿಯ ಗುರುತಿನ ಚೀಟಿ ತೋರಿಸದಿದ್ರೆ ದೇವರ ವಿಶೇಷ ದರ್ಶನ, ಉಚಿತ ಲಡ್ಡು ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ