ಮಹಿಳಾ ಭದ್ರತೆಗೆ ಸಂಬಂಧಿಸಿದಂತೆ ಚರ್ಚಿಸಲಿರುವ ಆಪ್

ಮಂಗಳವಾರ, 28 ಜುಲೈ 2015 (17:04 IST)
ದೆಹಲಿ ಪೊಲೀಸ್ ಜತೆಗಿನ ತನ್ನ ಭಿನ್ನಾಭಿಪ್ರಾಯದ ನಡುವೆ ಮಹಿಳೆಯರ ಭದ್ರತೆಗೆ ಸಂಬಂಧಿಸಿದಂತೆ ಇಂದು ವಿಶೇಷ ಅಧಿವೇಶನವನ್ನು ನಡೆಸುತ್ತಿರುವ ಆಪ್ ಸರ್ಕಾರ, ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಪೊಲೀಸ್ ನಿಷ್ಕ್ರಿಯತೆ ಕುರಿತಂತೆ ತನಿಖೆ ನಡೆಸಲು ಆಯೋಗವನ್ನು ರಚಿಸಲು ಸಹ ಚಿಂತನೆ ನಡೆಸಿದೆ. 

ಫೆಬ್ರವರಿ 2013 ರಲ್ಲಿ ಕಟ್ಟುನಿಟ್ಟಾದ ಅತ್ಯಾಚಾರ ವಿರೋಧಿ ಕಾನೂನನ್ನು ಪರಿಚಯಿಸಿದ ಹೊರತಾಗಿಯೂ ತನಿಖೆಯಾಗದ ಪ್ರಕರಣಗಳ ಕುರಿತು ತನಿಖೆ ನಡೆಸಲು  ಆಯೋಗವನ್ನು ಸ್ಥಾಪಿಸುವುದರ ಕುರಿತಂತೆ ಪ್ರಸ್ತಾವನೆಯನ್ನು ಸಲ್ಲಿಸಲು ಕಳೆದ ವಾರ ವಿಧಾನಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. 
 
ಜುಲೈ 16 ರಂದು ಆನಂದ್ ಪರ್ಬಾತ್ ಪ್ರದೇಶದಲ್ಲಿ 19 ವರ್ಷದ ಹುಡುಗಿಯ ನಿರ್ದಯ ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ  ಎಎಪಿ ಸರ್ಕಾರ ಮತ್ತು ದೆಹಲಿ ಪೊಲೀಸ್ ನಡುವಿನ ಜಟಾಪಟಿ ಉಲ್ಬಣಿಸಿತ್ತು. ಈ ಬಳಿಕ ವಿಶೇಷ ಅಧಿವೇಶನ ನಡೆಸುವ ತೀರ್ಮಾನವನ್ನು ಆಪ್ ಸರ್ಕಾರ ಕೈಗೊಂಡಿತ್ತು. 
 
ಆನಂದ್ ಪರ್ಬಾತ್‌ನಲ್ಲಿ ನಡೆದ ಪ್ರಕರಣವನ್ನು ದೆಹಲಿ ಪೊಲೀಸ್ ಲಘುವಾಗಿ ತೆಗೆದುಕೊಂಡಿತು. ಆರೋಪಿಯ ವಿರುದ್ಧ ದೂರನ್ನು ಗಂಭೀರವಾಗಿ ಪರಿಗಿಸಿದ್ದರೆ ಯುವತಿಯ ಜೀವವನ್ನು ಉಳಿಸಬಹುದಾಗಿತ್ತು ಎಂದು ಆಪ್ ಸರ್ಕಾರ ಆರೋಪಿಸಿದೆ. 

ವೆಬ್ದುನಿಯಾವನ್ನು ಓದಿ