ಫಂಡ್ ರೈಸರ್ ಡಿನ್ನರ್‌ ಮೂಲಕ 93 ಲಕ್ಷ ರೂ ಸಂಗ್ರಹಿಸಿದ ಆಪ್

ಶುಕ್ರವಾರ, 28 ನವೆಂಬರ್ 2014 (18:12 IST)
ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷಕ್ಕಾಗಿ ನಿಧಿ ಸಂಗ್ರಹ ಅಭಿಯಾನದಲ್ಲಿ ತೊಡಗಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್  ಯುವ ನೌಕರರು, ವಜ್ರ ವ್ಯಾಪಾರಿಗಳು ಮತ್ತು ಬ್ಯಾಂಕರ್‌‌ಗಳ ಜತೆ ಪ್ಲೇಟ್ ಊಟ ಒಂದಕ್ಕೆ ರೂ 20,000 ದೇಣಿಗೆ ಪಡೆದು ರಾತ್ರಿ ಊಟವನ್ನು ಆಯೋಜಿಸಿದ್ದರು.

ಫಂಡ್ ರೈಸರ್ ಡಿನ್ನರ್ ಮೂಲಕ ಕಳೆದ ರಾತ್ರಿ ನಾವು 91 ಲಕ್ಷ ರೂಪಾಯಿ ಕಲೆಕ್ಟ್ ಮಾಡಿದ್ದೇವೆ. ಡೋನರ್ ಪಾಸ್ ಮೂಲಕ 36 ಲಕ್ಷ ರೂಪಾಯಿ ಸಂಗ್ರಹಿಸಲಾಗಿತ್ತು. ಚೆಕ್ ಡೊನೆಶನ್ ಮೂಲಕ 36 ಲಕ್ಷ ಜಮಾ ಆಗಿದೆ. ನಮ್ಮ ಕಾರ್ಯಕರ್ತರು 21 ಲಕ್ಷ ರೂಪಾಯಿಯನ್ನು ಸಂಗ್ರಹಿಸಿದ್ದಾರೆ,"  ಎಂದು ಆಪ್ ನಾಯಕಿ ಪ್ರೀತಿ ಶರ್ಮಾ ಮೆನನ್ ಹೇಳಿದ್ದಾರೆ. 
 
ನಮ್ಮ ನಿಧಿ ಸಂಗ್ರಹಣಾ ರಾತ್ರಿ ಊಟಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ನಾವು ಪ್ರಭಾವಿತಗೊಂಡಿದ್ದೇವೆ. ನಮ್ಮ ಮುಂದಿನ ಫಂಡ್ ರೈಸ್ ಡಿನ್ನರ್ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. 
 
ಆನ್ಲೈನ್ ಡೊನೆಶನ್ ಸೇರಿದಂತೆ ವಿಭಿನ್ನವಾದ ವಿಧಾನಗಳ ಮೂಲಕ ನಿಧಿ ಸಂಗ್ರಹಣೆಯಲ್ಲಿ ತೊಡಗಿರುವ ಆಪ್ ಮೋದಿ ಬ್ರಾಂಡ್ ಮೇಲೆ ಅವಲಂಬಿತವಾಗಿರುವ ಬಿಜೆಪಿಗೆ ಟಾಂಗ್ ನೀಡಲು ಭರ್ಜರಿ ತಯಾರಿ ನಡೆಸಿದೆ.
 
ಮುಂಬೈ ಭೋಜನದಲ್ಲಿ ಹೆಚ್ಚೆಂದರೆ 200 ದಾನಿಗಳು ಭಾಗವಹಿಸಿದ್ದರು. ಅವರಲ್ಲಿ ಹೆಚ್ಚಿನವರು ನಮ್ಮ ಬೆಂಬಲಿಗರು. ಯುವ ವೃತ್ತಿಪರರು, ವಜ್ರ ವ್ಯಾಪಾರಿಗಳು ಮತ್ತು ಬಾಲಿವುಡ್‌ನ ನಿರ್ದೇಶಕರು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು," ಎನ್ನುತ್ತಾರೆ ಪ್ರೀತಿ.
 
ಆಪ್ ಮಹಾರಾಷ್ಟ್ರ ಘಟಕ ಮುಂದಿನ ಎರಡು ತಿಂಗಳಲ್ಲಿ 5 ಕೋಟಿ ರೂಪಾಯಿ ನಿಧಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ " ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ