ಎಎಪಿಗೆ ನಗರ ಶುಚಿಗೊಳಿಸುವ ಮನಸ್ಸಿಲ್ಲ, ಮೋದಿ ವಿರುದ್ಧ ಟೀಕೆಗೆ ಹೆಚ್ಚು ಗಮನ: ಹರ್ಷವರ್ದನ್

ಮಂಗಳವಾರ, 30 ಆಗಸ್ಟ್ 2016 (16:56 IST)
ಎಎಪಿಯ ಸಂಪೂರ್ಣ ಗಮನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡುವುದಾಗಿದ್ದು, ನಗರವನ್ನು ಶುಚಿಗೊಳಿಸುವುದು ಅದರ ಮನಸ್ಸಿನಲ್ಲಿಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಎಎಪಿ ಸರ್ಕಾರವನ್ನು ಟೀಕಿಸಿದರು. 
 
ದೆಹಲಿ ಮಾತ್ರವಲ್ಲ, ಪ್ರತಿಯೊಂದು ನಗರ ಕೂಡ ಇದೇ ಸಮಸ್ಯೆಗೆ ಸಿಲುಕಿದೆ. ಅವು ಬೆಳಿಗ್ಗೆ ಸ್ವಚ್ಛವಾಗಿರುತ್ತದೆ ಮತ್ತು ಮಧ್ಯಾಹ್ನ ಕೊಳಕಾಗುತ್ತವೆ. ಜನರ ಮನಸ್ಥಿತಿಯನ್ನು ಬದಲಿಸುವ ಅಗತ್ಯವಿದೆ. ನಗರವನ್ನು ಶುಚಿಗೊಳಿಸುವುದು ನೈರ್ಮಲ್ಯ ಕಾರ್ಮಿಕರ ಹೊಣೆಗಾರಿಕೆಯೆಂದು ಜನರು ಸಾಮಾನ್ಯವಾಗಿ ನಂಬಿದ್ದಾರೆಂದು ಹರ್ಷವರ್ದನ್ ವಿಶ್ಲೇಷಿಸಿದರು.
 
ದೆಹಲಿಯಲ್ಲಿ ಇನ್ನೊಂದು ಸಮಸ್ಯೆ ನಮ್ಮ ಅಧಿಕಾರ ಇಲ್ಲದಿರುವುದು. ಎಎಪಿ ಸರ್ಕಾರದ ಸಂಪೂರ್ಣ ಗಮನವು ಪ್ರಧಾನಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುವುದು. ಕೆಲವು ಜನರು ತಾವು  ಹಿಂದಿನಿಂದ ಬಯ್ದರೆ ಮಾಧ್ಯಮದ ಗಮನ ಸೆಳೆಯಬಹುದೆಂದು ಭಾವಿಸಿದ್ದಾರೆಂದು ವರದಿಗಾರರಿಗೆ ಅವರು ತಿಳಿಸಿದರು.  ಇಲ್ಲಿನ ಸಮಾರಂಭವೊಂದರಲ್ಲಿ ಸಚಿವರು ವಿವಿಧ ಧರ್ಮಗಳ 25 ಧಾರ್ಮಿಕ ಮುಖಂಡರ ಜತೆ ದೇಶದಲ್ಲಿ ಪರಿಪೂರ್ಣ ಸ್ವಚ್ಛತೆ ಸಾಧಿಸುವ ಪ್ರತಿಜ್ಞೆ ತೊಟ್ಟರು.

ವೆಬ್ದುನಿಯಾವನ್ನು ಓದಿ