ಇಂದು ಕೇಜ್ರಿವಾಲ್‌ರಿಂದ ವಿಧಾನಸಭೆಯಲ್ಲಿ ಲೋಕಪಾಲ್ ಮಸೂದೆ ಮಂಡನೆ

ಸೋಮವಾರ, 30 ನವೆಂಬರ್ 2015 (14:12 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರ ಇಂದು ವಿಧಾನಸಭೆಯಲ್ಲಿ ಲೋಕಪಾಲ್ ಮಸೂದೆಯನ್ನು ಮಂಡಿಸಲಿದೆ. ವಿಧಾನಸಭೆಯಲ್ಲಿ ಭಾರಿ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಮಸೂದೆಗೆ ಅಂಗೀಕಾರ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ 2014ರಲ್ಲಿದ್ದ ಲೋಕಪಾಲ ಮಸೂದೆಗೆ ತಿದ್ದುಪಡಿ ತರಲಾಗಿದೆ ಎಂದು ಮಾಜಿ ಆಪ್ ಸದಸ್ಯ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
 
ಸರಕಾರಿ ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳನ್ನು ಲೋಕಾಯುಕ್ತ ವ್ಯಾಪ್ತಿಗೆ ಒಳಪಡಿಸಿರುವುದು ಸೇರಿದಂತೆ ಇನ್ನತರ ಲೋಪದೋಷಗಳು ಮಸೂದೆಯಲ್ಲಿವೆ ಎಂದು ಕಿಡಿಕಾರಿದ್ದಾರೆ.
 
ಪ್ರಶಾಂತ್ ಭೂಷಣ ಆರೋಪಕ್ಕೆ ತಿರುಗೇಟು ನೀಡಿರುವ ಆಪ್ ನಾಯಕರು, ಬಿಜೆಪಿಯೊಂದಿಗಿನ ಸಂಬಂಧದಿಂದಾಗಿ ಭೂಷಣ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲೋಕಪಾಲ ಮಸೂದೆಯ ಬಗ್ಗೆ ಬಹಿರಂಗ ಚರ್ಚೆಗೆ ಮುಂದಾಗಲಿ ಎಂದು ಭೂಷಣ್ ಸವಾಲ್ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ