ಜನಪ್ರತಿನಿಧಿಗಳನ್ನು ತುಂಬು ಹೃದಯದಿಂದ ಗೌರವಿಸಿ: ಅಧಿಕಾರಿಗಳಿಗೆ ಕೇಜ್ರಿವಾಲ್ ಆದೇಶ

ಬುಧವಾರ, 2 ಸೆಪ್ಟಂಬರ್ 2015 (15:09 IST)
ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಯಾವ ರೀತಿ ವರ್ತಿಸಬೇಕು ಎನ್ನುವ ಕುರಿತಂತೆ ಆಮ್ ಆಮ್ ಪಕ್ಷದ ಸರಕಾರ ಆದೇಶವನ್ನು ಹೊರಡಿಸಿದೆ.
 
ಸಂಸದರು ಮತ್ತು ಶಾಸಕರು ಕಚೇರಿಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಅವರನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಲಾಗಿದೆ.
 
ಸಂಸದರಾಗಲಿ, ಶಾಸಕರಾಗಲಿ ಅಥವಾ ಸಚಿವರಾಗಲಿ ಕಚೇರಿಗಳಿಗೆ ಭೇಟಿ ನೀಡುವ ಮುನ್ನವೇ ಅಧಿಕಾರಿಗಳು ಅವರ ಆಗಮನದ ಮಾಹಿತಿ ತಿಳಿದುಕೊಂಡು ವ್ಯವಸ್ಥೆ ಮಾಡಿಕೊಳ್ಳಬೇಕು. ಸರಕಾರಿ ಕಾರ್ಯಕ್ರಮಗಳಿಗೆ ಅಧಿಕಾರಿಗಳು  ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು ಎಂದು ಮಾಹಿತಿ ನೀಡಲಾಗಿದೆ. 
 
ದೆಹಲಿಯಲ್ಲಿರುವ ಅಧಿಕಾರಿಗಳು ತಮಗೆ ದೊರೆಯಬೇಕಾದ ಗೌರವಗಳನ್ನು ನೀಡುತ್ತಿಲ್ಲ ಎಂದು ಆಪ್ ಶಾಸಕರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸರಕಾರಿ ಆದೇಶ ಹೊರಬಿದ್ದಿದೆ.
 
ಸರಕಾರಿ ಅಧಿಕಾರಿಗಳು ನಾವು ಮಾಡಿದ ಕರೆಗಳಿಗೆ ಉತ್ತರಿಸುವ ಸೌಜನ್ಯ ಕೂಡಾ ತೋರುತ್ತಿಲ್ಲ ಎಂದು ,ಆಮ್ ಆದ್ಮಿ ಪಕ್ಷದ ಶಾಸಕರು ಕೇಜ್ರಿವಾಲ್‌ಗೆ ಲಿಖಿತ್ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ