ಆಪ್ ಲೋಕಪಾಲ್ ಮಹಾಜೋಕ್‌ಪಾಲ್‌ನಂತೆ: ಕೇಜ್ರಿವಾಲ್‌ಗೆ ಪ್ರಶಾಂತ್ ಭೂಷಣ ಲೇವಡಿ

ಶನಿವಾರ, 28 ನವೆಂಬರ್ 2015 (13:44 IST)
ಗಾಂಧಿವಾದಿ ಅಣ್ಣಾ ಹಜಾರೆ ಚಳುವಳಿಯಲ್ಲಿ ರೂಪಿಸಲಾಗಿದ್ದ ಜನಲೋಕಪಾಲ್ ಮಸೂದೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿದ್ದುಪಡಿ ತಂದು ಜನಲೋಕಪಾಲ್‌ನ್ನು ಮಹಾಜೋಕ್‌ಪಾಲ್‌‌ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಸುಪ್ರೀಂಕೋರ್ಟ್‌ ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
 
ಜನಲೋಕಪಾಲ್ ಮಸೂದೆಯ ಕೆಲ ಅಂಶಗಳನ್ನು ಪ್ರಸ್ತಾಪಿಸಿದ ಭೂಷಣ್,  ಕೇಂದ್ರ ಸರಕಾರದ ವಿರುದ್ಧ ಸಮರ ಸಾರಲು ಕೇಂದ್ರದಲ್ಲಿರುವ ಸಚಿವರು ಮತ್ತು ಅಧಿಕಾರಿಗಳನ್ನು ಲೋಕಪಾಲ್ ವ್ಯಾಪ್ತಿಗೆ ಉದ್ದೇಶಪೂರ್ವಕವಾಗಿ ಸೇರ್ಪಡೆಗೊಳಿಸಿದ್ದಾರೆ ಎಂದು ಕಿಡಿಕಾರಿದರು.
 
ಪ್ರಧಾನಿ ನರೇಂದ್ರ ಮೋದಿಯಂತೆ ದೆಹಲಿ ಸಿಎಂ ಕೇಜ್ರಿವಾಲ್ ಕೂಡಾ ಯಾರಾದರೂ ಪ್ರಶ್ನಿಸುವುದನ್ನು ಸಹಿಸುವುದಿಲ್ಲ. ಆದ್ದರಿಂದ, ಲೋಕಪಾಲ್‌ನ ಎಲ್ಲಾ ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂದು ಕಿಡಿಕಾರಿದರು. 
 
ರಾಜ್ಯ ಸರಕಾರದ ಆಧೀನದಲ್ಲಿ ಲೋಕಪಾಲರ ನೇಮಕ ಮತ್ತು ವಜಾ ಪ್ರಕ್ರಿಯೆ ಒಳಪಡಿಸಿರುವುದು ಪಾರದರ್ಶಕವಲ್ಲ ಎಂದು ಭೂಷಣ್ ಹೇಳಿದ್ದಾರೆ.
 
ದೆಹಲಿ ಮುಖ್ಯಮಂತ್ರಿ ಸೇರಿದಂತೆ ನಾಲ್ಕು ಮಂದಿ ಸದಸ್ಯರ ಸಮಿತಿ, ಸಭಾಪತಿ, ವಿಪಕ್ಷ ನಾಯಕ ಮತ್ತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಒಮ್ಮತದ ಮೇರೆಗೆ ಲೋಕಪಾಲರನ್ನು ನೇಮಕ ಮಾಡಲಾಗುವುದು. ಲೋಕಪಾಲರನ್ನು ವಜಾಗೊಳಿಸಬೇಕಾದಲ್ಲಿ ಸದನದಲ್ಲಿ ಎರಡನೇ ಮೂರರಷ್ಟು ಬಹುಮತ ಅಗತ್ಯವಿದೆ.

ವೆಬ್ದುನಿಯಾವನ್ನು ಓದಿ