ಕಳಂಕಿತ ಬಿಜೆಪಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಆಪ್ ಧರಣಿ

ಸೋಮವಾರ, 29 ಜೂನ್ 2015 (12:55 IST)
ಲಲಿತ್ ಮೋದಿಯವರಿಗೆ ನೆರವು ನೀಡಿರುವ ಆರೋಪವನ್ನೆದುರಿಸುತ್ತಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಮತ್ತು ವಿದ್ಯಾರ್ಹತೆಗೆ ಸಂಬಂಧಪಟ್ಟ ಸುಳ್ಳು ಹೇಳಿದ ಆರೋಪಗಳನ್ನೆದುರಿಸುತ್ತಿರುವ  ಸಚಿನೆ ಸ್ಮೃತಿ ಇರಾನಿಯವರ ರಾಜೀನಾಮೆಗೆ ಆಗ್ರಹಿಸಿ ಇಂದು ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ರಾಜಧಾನಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.
 


ಜಂತರ್ ಮಂತರ್‌ನಿಂದ ಸಂಸತ್ತಿನವರೆಗೂ ಪ್ರತಿಭಟನಾ ಮೆರವಣಿಗೆ ಸಾಗಲಿದೆ. 
 
ಲಲಿತ್ ಮೋದಿ ವೀಸಾ ಪಡೆಯಲು ನೆರವು ನೀಡಿದ್ದಾರೆ ಎಂದು ಸುಷ್ಮಾ ಕುರಿತು ಆರೋಪಗಳು ಕೇಳಿ ಬಂದಾಗ ಬಿಜೆಪಿ ಇಕ್ಕಟ್ಟಲ್ಲಿ ಸಿಲುಕಿತ್ತು. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ತಾವು ಲಂಡನ್‌ನಲ್ಲಿ ನೆಲೆಯೂರಲು ಸಲ್ಲಿಸಿದ್ದ ಮನವಿ ಪತ್ರಕ್ಕೆ  ರಹಸ್ಯವಾಗಿ ಸಹಿ ಹಾಕಿದ್ದಾರೆ ಎಂದು ಹೇಳುವ ಮೂಲಕ ಲಲಿತ್ ಮೋದಿ ಸಂಕಷ್ಟವನ್ನು ತೀವೃಗೊಳಿಸಿದ್ದರು. 
 
ಆಕೆಯ ಮೇಲಿನ ಆರೋಪವನ್ನು ಸಾಬೀತು ಪಡಿಸುವ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದ ಕಾಂಗ್ರೆಸ್  ರಾಜೇ ರಾಜಿನಾಮೆಗೆ ಪಟ್ಟು ಹಿಡಿದು ಕುಳಿತಿದೆ. 
 
ಏತನ್ಮಧ್ಯೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರ ವಿದ್ಯಾರ್ಹತೆ ಕುರಿತ ದೂರನ್ನು ವಿಚಾರಣೆಗೊಳಪಡಿಸಲು ದೆಹಲಿ ಕೋರ್ಟ್ ಒಪ್ಪಿಗೆ ನೀಡಿದೆ. 

ವೆಬ್ದುನಿಯಾವನ್ನು ಓದಿ