ಭೂಗತ ಪಾತಕಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ

ಬುಧವಾರ, 25 ಫೆಬ್ರವರಿ 2015 (12:37 IST)
ಉದ್ಯಮಿ ಪ್ರದೀಪ್ ಜೈನ್ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಅಬು ಸಲೇಂಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಮುಂಬೈನ ವಿಶೇಷ ಟಾಡಾ ಕೋರ್ಟ್ ಈ ಶಿಕ್ಷೆಯನ್ನು ಪ್ರಕಟಿಸಿದೆ. 1995ರಲ್ಲಿ ಮುಂಬೈನ ಪ್ರದೀಪ್ ಜೈನ್ ಹತ್ಯೆಯಾಗಿತ್ತು. ಕೇಸ್‌ನಲ್ಲಿ ಅಬು ಸಲೇಂ ಅಪರಾಧಿ ಎಂದು ತೀರ್ಮಾನಿಸಲಾಗಿತ್ತು. ದಾವೂದ್ ಇಬ್ರಾಹಿಂ ಮಾಜಿ ಸಹಚರನಾಗಿದ್ದ ಅಬು ಸಲೇಂ ತಲೋಜಾ ಕೇಂದ್ರ ಜೈಲಿನಲ್ಲಿ ಬಂಧಿಯಾಗಿದ್ದಾನೆ.  

ಜೈನ್ ಹತ್ಯೆ ವಿಚಾರಣೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವರ್ ನಿಕಮ್ ಆರಂಭದಲ್ಲಿ ಮರಣ ದಂಡನೆ ಶಿಕ್ಷೆಗೆ ಒತ್ತಾಯಿಸಿದ್ದರು. ಆದರೆ ಪೋರ್ಚು‌ಗಲ್ ಮತ್ತು ಭಾರತ ನಡುವೆ ಗಡೀಪಾರು ಒಪ್ಪಂದದ ಅನ್ವಯ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ್ದರು.

ಎರಡು ರಾಷ್ಟ್ರಗಳ ನಡುವೆ ಒಪ್ಪಂದ ಉಲ್ಲಂಘನೆಯಾಗುವುದರಿಂದ ಅಬುಸಲೇಂಗೆ ಮರಣದಂಡನೆ ನೀಡಬಾರದೆಂದು ಸಲೇಂ ವಕೀಲ ಸುದೀಪ್ ಪಾಸ್ಗೋಲಾ ವಾದಿಸಿದ್ದರು.ಪ್ರದೀಪ್ ಜೈನ್ ಅವರನ್ನು ಜುಹು ನಿವಾಸದ ಹೊರಗೆ ಸಲೇಂ ಮತ್ತು ಇನ್ನೂ ಇಬ್ಬರಾದ ಮೆಹಂದಿ ಹಸನ್ ಮತ್ತು ವೀರೇಂದ್ರ ಜಂಬ್ ಗುಂಡಿಕ್ಕಿ ಕೊಂದಿದ್ದರು. ಆಸ್ತಿ ವಿವಾದವೇ ಈ ಹತ್ಯೆಗೆ ಕಾರಣವಾಗಿತ್ತು. 
 

ವೆಬ್ದುನಿಯಾವನ್ನು ಓದಿ