ಭಾರತದಲ್ಲಿ ನೇಣುಶಿಕ್ಷೆಗೆ ಗುರಿಯಾಗುತ್ತಿರುವ ಪ್ರಥಮ ಮಹಿಳೆ ನೇಹಾ ವರ್ಮಾ?

ಶನಿವಾರ, 1 ಆಗಸ್ಟ್ 2015 (17:26 IST)
ಉಗ್ರ ಯಾಕೂಬ್ ಮೆಮೊನ್ ಗಲ್ಲಿಗೇರಿದ ಬಳಿಕ ಆ ಸಾಲಿನಲ್ಲಿ ಹಲವರ ಹೆಸರು ಕಾದು ಕುಳಿತಿದೆ. ಅದರಲ್ಲೊಂದು ಇಂದೋರ್‌ನಲ್ಲಿ ನಡೆದ ಒಂದು ಕುತೂಹಲಕಾರಿ  ಕೇಸ್. ಒಂದೇ ಕುಟುಂಬದ ಮೂವರು ಮಹಿಳೆಯರನ್ನು ದರೋಡೆ ಮಾಡಿದ ಬಳಿಕ ಅಮಾನುಷವಾಗಿ ಕೊಂದ 27 ವರ್ಷದ ನೇಹಾ ವರ್ಮಾ ಪ್ರಕರಣವದು. 
ತನ್ನ ಮೂವರು ಸಹಚರರ ಜತೆ ನೇಹಾ ವರ್ಮಾಳನ್ನು ಗಲ್ಲಿಗೇರಿಸುವಂತೆ ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ತಡೆ ಒಡ್ಡಿದ್ದರಿಂದ ಆ ನಾಲ್ವರು ಇಂದೋರ್ ಜೈಲಿನಲ್ಲಿದ್ದರು. ಮೂವರು ಅಪರಾಧಿಗಳಿಗೆ ಕೆಳ ಹಂತದ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು ಮತ್ತು ಜಿಲ್ಲಾ ಮತ್ತು ರಾಜ್ಯ ಹೈಕೋರ್ಟ್‌ಗಳು ಈ ತೀರ್ಪನ್ನು ಎತ್ತಿ ಹಿಡಿದಿದ್ದವು. 
 
19 ಜೂನ್ 2011 ರಲ್ಲಿ ಕುಟುಂಬವೊಂದನ್ನು ದರೋಡೆ ಮಾಡಿದ್ದ  ಈ ನಾಲ್ವರು 1.5 ಲಕ್ಷ  ಮೌಲ್ಯದ ಧನಕನಕಗಳನ್ನು ದೋಚಿ ನಂತರ ಅವರನ್ನು ಅಮಾನುಷವಾಗಿ ಕೊಲೆಗೈದಿದ್ದರು. 
 
ವೃತ್ತಿಯಲ್ಲಿ ವಿಮಾ ಏಜೆಂಟ್ ಆಗಿದ್ದ ನೇಹಾ ಈ ಪ್ರಕರಣದ ಮಾಸ್ಟರ್ ಮೈಂಡ್. ವೈಭವಯುತ ಜೀವನವನ್ನು ನಡೆಸಬೇಕೆಂಬ ಲಾಲಸೆಯಲ್ಲಿ ಆಕೆ  ಈ ಕುಕೃತ್ಯಕ್ಕೆ ಕೈ ಹಾಕಿದ್ದಳು.
 
ಆಕೆಗೆ ಮೂರು ಬಾರಿ ಗಲ್ಲು ಶಿಕ್ಷೆ ನೀಡಲಾಗಿದೆ. ಆದರೆ ಸುಪ್ರೀಕೋರ್ಟ್‌ ಮೆಟ್ಟಿಲೇರಿರುವ ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗಬೇಕಿದೆ. 

ವೆಬ್ದುನಿಯಾವನ್ನು ಓದಿ