ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಂಗೀತ ರಚನೆಕಾರ

ಶನಿವಾರ, 23 ಆಗಸ್ಟ್ 2014 (13:09 IST)
ಮುಂಬೈನಲ್ಲಿ  ಚಿತ್ರ ನಿರ್ಮಾಣ ಸಂಸ್ಥೆ ಹೊಂದಿರುವ 27 ವರ್ಷ ವಯಸ್ಸಿನ ನಟಿಯೊಬ್ಬರು ಸಂಗೀತ ರಚನೆಕಾರನೊಬ್ಬ  ಗ್ರೇಟರ್ ಕೈಲಾಸ್ ಹೊಟೆಲ್ ಕೋಣೆಯಲ್ಲಿ ತನ್ನ ಮೇಲೆ ಲೌಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಅಂಕುರ್ ಶರ್ಮಾ ಎಂಬವನನ್ನು ಬಂಧಿಸಿ ತಿಹಾರ ಜೈಲಿಗೆ ಕಳಿಸಿದ್ದಾರೆ.
 
 
ಸುಮಾರು ಬೆಳಿಗ್ಗೆ 11 ಗಂಟೆಗೆ ನಟಿ ಪೊಲೀಸರಿಗೆ ಕರೆ ಮಾಡಿದಳು. ಬಿಸಿನೆಸ್ ಒಪ್ಪಂದ ಕುದುರಿಸಲು ತಾನು ಎರಡು ದಿನಗಳ ಕೆಳಗೆ ದೆಹಲಿಗೆ ಬಂದಿದ್ದು, ಇದಕ್ಕೆ ಸಂಬಂಧಿಸಿದ ಜನರನ್ನು ಭೇಟಿ ಮಾಡುತ್ತಿದ್ದೆ.ಶರ್ಮಾ ನಟಿಯಿದ್ದ ಕೋಣೆಗೆ  ಮುಂದಿನ ನಿರ್ಮಾಣ ಯೋಜನೆ ಅಂತಿಮಗೊಳಿಸಲು ಹೋಗಿದ್ದ. ಆ ಸಂದರ್ಭದಲ್ಲಿ ನಟಿಯ ಜೊತೆ ಅಸಭ್ಯವಾಗಿ ವರ್ತಿಸಿ ತಬ್ಬಿಕೊಳ್ಳಲು ಯತ್ನಿಸಿದ ಎಂದು ಅವಳು ದೂರಿದ್ದಾಳೆ. 
 
 
ಅವನ ಪ್ರಯತ್ನಕ್ಕೆ ನಟಿ ವಿರೋಧಿಸಿದಾಗ ಆಕ್ರಮಣಕಾರಿ ಮನೋಭಾವ ತಾಳಿದ ಶರ್ಮಾ  ತನ್ನ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಿದ ಎಂದು ದೂರಿನಲ್ಲಿ ಹೇಳಿದ್ದಾಳೆ. 
ಯುವತಿ ಕಿರುಚಿಕೊಂಡಾಗ ಹೊಟೆಲ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ ಪೊಲೀಸರು ಆಗಮಿಸಿ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು. ಆರೋಪಿ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನೃತ್ಯೋತ್ಸವದಲ್ಲಿ ತಾವು ಮುಂಚೆ ಭೇಟಿಯಾಗಿದ್ದೇವೆಂದು ತಿಳಿಸಿದ್ದಾನೆ.

ಪೊಲೀಸರು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಕೇಸ್ ದಾಖಲು ಮಾಡಿದ್ದು, ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಹೊಟೆಲ್ ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸುತ್ತಿದ್ದಾರೆ. ಆರೋಪಿಯ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ ಬಳಿಕ ಯುವತಿಯಿಂದ ಸಂಗ್ರಹಿಸಿದ ಡಿಎನ್‌ಎ ಮಾದರಿಗಳನ್ನು ಅದರ ಜೊತೆ ಹೋಲಿಕೆ ಮಾಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ