ದೊಡ್ಡವರ ರಾತ್ರಿ ರಹಸ್ಯಗಳು ನನಗೆ ಗೊತ್ತು: ನಟಿ ನಯನ ಕೃಷ್ಣ

ಮಂಗಳವಾರ, 22 ಜುಲೈ 2014 (16:30 IST)
ವೈದ್ಯರಿಗೆ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಚಿತ್ರ ನಟಿ ನಯನಾ ಕೃಷ್ಣ, ದೊಡ್ಡವರ ರಾತ್ರಿ ರಹಸ್ಯಗಳು ನನಗೆ ಗೊತ್ತಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾಳೆ.
 
ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಆರೋಪಿಯಾಗಿರುವ ನನ್ನನ್ನು ಆರೋಪಿ ಸ್ಥಾನದಿಂದ ಕೈ ಬಿಟ್ಟು ಮಾಫಿ ಸಾಕ್ಷಿಯಾಗಿ ಪರಿವರ್ತಿಸಿದಲ್ಲಿ, ಎಲ್ಲಾ ರಹಸ್ಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ನಟಿ ನಯನ ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ್ದಾಳೆ.
 
ವೈದ್ಯರ ಬ್ಲ್ಯಾಕ್‌ಮೇಲ್ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನಾಪತ್ತೆಯಾದ ಚಿತ್ರನಟಿ ನಯನಾ ಕೃಷ್ಣ ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಪೊಲೀಸರು ಆಕೆಯ ವಶಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. 
 
ಪೊಲೀಸರಿಗೆ ನಯನಾ ಕೃಷ್ಣ ಆಫರ್ ನೀಡಿದ್ದರೂ ಅವಳು ಕಾಣದಂತೆ ಎಲ್ಲಿ ಮಾಯವಾಗಿದ್ದಾಳೆ ಎನ್ನುವ ಬಗ್ಗೆ ಪೊಲೀಸರು ತಲೆಕೆಡಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ