ಲೋಕಸಭೆಯ ನೈತಿಕ ಸಮಿತಿ ಅಧ್ಯಕ್ಷರಾದ ಆಡ್ವಾಣಿ

ಗುರುವಾರ, 18 ಸೆಪ್ಟಂಬರ್ 2014 (14:50 IST)
ಪಕ್ಷದ ಅಥವಾ ಸರ್ಕಾರದ ಸಕ್ರಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ದೂರವಿರಿಸಲ್ಪಟ್ಟ, ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅಂತಿಮವಾಗಿ ಹೊಸ ಪಾತ್ರವನ್ನು ವಹಿಸಿಕೊಂಡಿದ್ದು, ಲೋಕಸಭೆಯ ನೈತಿಕ ಸಮಿತಿಯ ಅಧ್ಯಕ್ಷರಾಗಿ ಅವರು ನೇಮಕಗೊಂಡಿದ್ದಾರೆ.

ಸದಸ್ಯರ ಅನೈತಿಕ ನಡೆಗಳಿಗೆ ಸಂಬಂಧಿಸಿದ ಪ್ರತಿ ದೂರನ್ನು ಈ ಸಮಿತಿಯು ಪರಿಶೀಲಿಸುತ್ತದೆ. ಇಂಥ ವಿಚಾರಗಳಲ್ಲಿ ಸಮಿತಿಯು ಸ್ವಯಂ ಪ್ರೇರಿತ ತನಿಖೆ ನಡೆಸಿ, ಅಗತ್ಯವಾದಲ್ಲಿ ಸಂಬಂಧಿಸಿದ ಸದಸ್ಯನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದೆ. ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಾಣಿಕ್ ರಾವ್ ಗವಿತ್ ಈ ಸಮಿತಿಯ ಮುಖ್ಯಸ್ಥರಾಗಿದ್ದರು.
 
ಆಡ್ವಾಣಿ ಅವರು ಸಾರ್ವಜನಿಕ ಉದ್ಯಮಗಳ ಸಮಿತಿ ಮತ್ತು ಮಾಹಿತಿ ತಂತ್ರಜ್ಞಾನ ಸಮಿತಿಗಳ ಸದಸ್ಯರೂ ಆಗಿದ್ದಾರೆ.
 
ಸಮಿತಿಯ ಇತರ ಸದಸ್ಯರು: ಅರುಣಮೋಳಿದೇವನ್(ಎಐಎಡಿಎಂಕೆ), ನಿನಾಂಗ್ ಎರಿಂಗ (ಕಾಂಗ್ರೆಸ್), ಶೇರ್ ಸಿಂಗ್ ಘುಬಯಾ (ಅಕಾಲಿದಳ), ಹೇಮಂತ್ ತುಕಾರಾಮ್ ಗೋಡ್ಸೆ (ಶಿವಸೇನೆ), ಕರಿಯ ಮುಂಡ, ಭಗತ್ ಸಿಂಗ್ ಕೋಶ್ಯಾರಿ, ಪ್ರಹ್ಲಾದ್ ಜೋಶಿ, ಅರ್ಜುನ್ ರಾಮ್ ಮೇಘವಾಲ್, ಜಯಶ್ರೀ ಪಟೇಲ್, ಸುಮೇಧಾನಂದ ಸರಸ್ವತಿ ಮತ್ತು ಭೋಲಾ ಸಿಂಗ್ (ಎಲ್ಲರೂ ಬಿಜೆಪಿ), ಬ್ರತೃಹರಿ ಮಹ್ತಾಬ್ (ಬಿಜೆಡಿ) ಮತ್ತು ಮಲ್ಲ ರೆಡ್ಡಿ (ತೆಲುಗು ದೇಶಂ).

ವೆಬ್ದುನಿಯಾವನ್ನು ಓದಿ