1947ರ ಸಣ್ಣ ತಪ್ಪಿನಿಂದ ಪಾಕ್ ಅಸ್ತಿತ್ವಕ್ಕೆ ಬಂತು: ಆರ್‌ಎಸ್ಎಸ್

ಶನಿವಾರ, 20 ಡಿಸೆಂಬರ್ 2014 (18:39 IST)
1947 ರಲ್ಲಾದ ಸಣ್ಣ ತಪ್ಪಿಂದ ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. 
ಪಾಕ್ ಮತ್ತು ಬಾಂಗ್ಲಾದ ಮೇಲೆ ಹರಿಹಾಯ್ದಿರುವ ಸಂಘದ ನಾಯಕ, ಬಾಂಗ್ಲಾದಿಂದ ಅಕ್ರಮವಾಗಿ ನಮ್ಮ ದೇಶಕ್ಕೆ ನುಸುಳುತ್ತಿರುವುದರ ಕುರಿತು ಕಿಡಿಕಾರಿದರು. 1947ರ ಸಣ್ಣ ತಪ್ಪಿನಿಂದ ಪಾಕ್ ಅಸ್ತಿತ್ವಕ್ಕೆ ಬಂತು. ಪಾಕ್ ಹಿಂದೂಗಳನ್ನು ಶಾಂತಿಯಿಂದ ಬದುಕಲು ಅವಕಾಶ ಕೊಡಲಿಲ್ಲ. ಈಗ ನೋಡಿ ಅವರಿಗೆ ಶಾಂತಿ ಇದೆಯೇ? ಎಂದು ಅವರು ಪ್ರಶ್ನಿಸಿದರು. 
 
ಧರ್ಮಪರಿವರ್ತನೆ ವಿವಾದವನ್ನು ಉಲ್ಲೇಖಿಸಿ ಮಾತನಾಡಿರುವ  ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತಾಂತರವನ್ನು ವಿರೋಧಿಸುವವರು ಇದನ್ನು ನಿಷೇಧಿಸಲು ಕಾನೂನು ಜಾರಿಗೆ ತನ್ನಿ ಎಂದು ಒತ್ತಾಯಿಸಿದ್ದಾರೆ. 
 
ಕೋಲ್ಕತಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು ನೀವು ಮತಾಂತರವನ್ನು ವಿರೋಧಿಸುತ್ತೀರಿ ಎಂದಾದರೆ  ಅದರ ವಿರುದ್ಧ ಕಾನೂನು ಜಾರಿಗೆ ತನ್ನಿ ಎಂದು ಹೇಳಿದರು. 
 
ಇತರ ಧರ್ಮಗಳಿಂದ ಹಿಂದೂ ಧರ್ಮಕ್ಕೆ ಪರಿವರ್ತನೆಯಾಗುವುದು ಸರಿ ಅಲ್ಲ ಎನ್ನುವವರು ಹಿಂದೂ ಧರ್ಮದಿಂದ ಇತರ ಧರ್ಮಕ್ಕೆ ಮತಾಂತರವಾಗುವುದನ್ನು ಕೂಡ ತಡೆಯಬೇಕು ಎಂದಿದ್ದಾರೆ ಭಾಗವತ್. 
 
ಆಗ್ರಾದಲ್ಲಿ ನಡೆದ ಮತಾಂತರವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿದ ಅವರು ದಾರಿ ತಪ್ಪಿದವರನ್ನು ವಾಪಸ್ ತರುವ ಕೆಲಸವಾಗುತ್ತಿದೆಯಷ್ಟೇ. ಬಲಪ್ರಯೋಗದಿಂದ ಮತಾಂತರವಾದವರನ್ನು ಮಾತ್ರ ಮರಳಿ ಮಾತೃ ಧರ್ಮಕ್ಕೆ ಕರೆತರುತ್ತಿದ್ದೇವೆ. ಭಾರತ ಹಿಂದೂ ರಾಷ್ಟ್ರ. ನಮ್ಮ ಮೂಲ ಭಾರತ, ನಾವು ಇಲ್ಲೇ ಹುಟ್ಟಿ, ಇಲ್ಲೇ ಬದುಕುತ್ತಿರುವವರು. ನಾವು ಎಲ್ಲಿಂದಲೋ ಬಂದಿಲ್ಲ. ಎಲ್ಲವನ್ನು ನಾವು ಸಹಿಸಿಕೊಳ್ಳುತ್ತಿದ್ದೇವೆ. ಆದರೆ ಅವರನ್ನು ಇಡೀ ಜಗತ್ತೇ ಸಹಿಸಿಕೊಳ್ಳಬೇಕಿದೆ. ನಾವೆಲ್ಲ ಹಿಂದೂಗಳು ಎದ್ದು ನಿಲ್ಲಬೇಕಿದೆ.  ನಮ್ಮ ಸಂಘಟಿತ ಶಕ್ತಿಯ ಮುಂದೆ ಯಾವ ದುಷ್ಟ ಶಕ್ತಿಯೂ ನಿಲ್ಲುವುದಿಲ್ಲ.  ಹಿಂದೂ ಸಮಾಜ ಎದ್ದು ನಿಲ್ಲಬೇಕಿದೆ. ನಾವು ಯಾರಿಗೂ ಹೆದರಬೇಕಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ