ಮತ್ತೊಬ್ಬ ಪಾಕ್ ಗೂಢಾಚಾರನ ಬಂಧನ

ಶುಕ್ರವಾರ, 28 ಅಕ್ಟೋಬರ್ 2016 (16:13 IST)
ಪಾಕ್ ಪರ ಗೂಢಾಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ನಿನ್ನೆ ಅಷ್ಟೇ ಪಾಕ್ ರಾಯಭಾರ ಕಚೇರಿಯ ಅಧಿಕಾರಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಬೆನ್ನಲ್ಲೇ ಮತ್ತೊಬ್ಬ ಐಎಸ್ಐ ಗೂಢಾಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ. 

 
ಬಂಧಿತನನ್ನು ಶೋಯೆಬ್ ಎಂದು ಗುರುತಿಸಲಾಗಿದ್ದು ಈತ ಜೋಧ್ಪುರದಲ್ಲಿ ಪಾಸ್ ಪೋರ್ಟ್ ಮತ್ತು ವೀಸಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. 
 
ಪಾಕ್‌ನ ಐಎಸ್ಐ ಸಂಘಟನೆಗೆ ಭಾರತದ ಗೌಪ್ಯ ಮಾಹಿತಿಗಳನ್ನಾತ ರವಾನಿಸುತ್ತಿದ್ದಾನೆ ಎಂಬ ಶಂಕೆಯ ಮೇಲೆ ಆತನನ್ನು ಬಂಧಿಸಲಾಗಿದೆ. 
 
ದೇಶದ ಭದ್ರತೆಗೆ ಸಂಬಂಧಪಟ್ಟ ದಾಖಲೆ ಆರೋಪ ಹೊಂದಿದ ಆರೋಪದ ಮೇಲೆ ಪಾಕ್ ಹೈ ಕಮಿಷನ್‌ನ ಮೆಹಮೂದ್ ಅಕ್ತರ್‌ (35)  ಎಂಬುವವರನ್ನು ಗುರುವಾರ ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ನೀವು ಇಲ್ಲಿ ಕೆಲಸ ಮಾಡುವುದು ಭಾರತಕ್ಕೆ ಸಮ್ಮತಿ ಇಲ್ಲ. ಶನಿವಾರದೊಳಗೆ ದೇಶ ಬಿಡಿ ಎಂದು ಅವರಿಗೆ ಸೂಚನೆ ನೀಡಲಾಗಿದೆ. 
 
ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಗೋಪ್ಯ ದಾಖಲೆಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಅಕ್ತರ್‌ಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಸುಭಾಷ್ ಜಂಗೀರ್ ಮತ್ತು ಮೌಲಾನಾ ರಮ್ಜಾನ್ ಎಂಬುವವರನ್ನು ಸಹ ಬಂಧಿಸಲಾಗಿತ್ತು. ಅವರಿಬ್ಬರ ಬಂಧನದ ವೇಳೆ ಶೋಯೆಬ್ ಸಹ ಅಲ್ಲಿಯೇ ಇದ್ದ. ಆದರೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಮತ್ತೀಗ ಆತನನ್ನು ಕೂಡ ಬಂಧಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ