ನಮೋ ಜಾಕೆಟ್ ನಂತ್ರ ಐ ಲವ್ ಮೋದಿ ಪೆನ್‌ಗಳು ಮಾರುಕಟ್ಟೆಗೆ ಲಗ್ಗೆ

ಗುರುವಾರ, 31 ಮಾರ್ಚ್ 2016 (19:02 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಮೋ ಜಾಕೆಟ್ ಮಾರುಕಟ್ಟೆಯಲ್ಲಿ ಕೋಲಾಹಲವೆಬ್ಬಿಸಿ ಜನಪ್ರಿಯತೆ ಪಡೆದ ನಂತರ ಇದೀಗ ಐ ಲವ್ ಯೂ ಮೋದಿ ಎನ್ನುವ ಪೆನ್‌ಗಳು ಗುಜರಾತ್ ಮಾರುಕಟ್ಟೆಗೆ ಅಪ್ಪಳಿಸಿವೆ.
ಗುಜರಾತ್‌ನಲ್ಲಿ 10ನೇ ಮತ್ತು 12 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಐ ಲವ್ ಮೋದಿ ಎನ್ನುವ ನಮೋ ಪೆನ್‌ಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಐ ಲವ್ ಮೋದಿ ಎನ್ನುವ ಪೆನ್‌ಗಳನ್ನು ಕೇಸರಿ ಬಣ್ಣದ ಕವರ್‌ನಲ್ಲಿ ಪ್ಯಾಕ್ ಮಾಡಲಾಗಿದ್ದು, ಪೆನ್‌ ಮೇಲೆ ನರೇಂದ್ರ ಮೋದಿ ಭಾವಚಿತ್ರ ಮತ್ತು ಬಿಜೆಪಿಯ ಕಮಲದ ಚಿಹ್ನೆಯನ್ನು ಮುದ್ರಿಸಲಾಗಿದೆ. 
 
ಐ ಲವ್ ಮೋದಿ ಎನ್ನುವ ಪೆನ್‌ಗಳನ್ನು ಖಾಸಗಿ ಸಂಸ್ಥೆಯೊಂದು 10ನೇ ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುವ ಮುಂಚೆಯೇ ಉಡುಗೊರೆಯಾಗಿ ನೀಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ