ಪಟೇಲ್ ಸಮುದಾಯದ ನಂತ್ರ, ಅರ್ಚಕರಿಗೂ ಮೀಸಲಾತಿ ಬೇಕಂತೆ..!

ಭಾನುವಾರ, 4 ಅಕ್ಟೋಬರ್ 2015 (15:45 IST)
ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಹಸಿರಾಗಿರುವಂತೆಯೇ ಬ್ರಾಹ್ಮಣರು ಕೂಡಾ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
 
ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸರಕಾರವೇ ವೇತನ ನೀಡಬೇಕು ಎಂದು ಅಖಿಲ್ ಗುಜರಾತ್ ಬ್ರಾಹ್ಮಣ ಸಮಾಜ ಒತ್ತಾಯಿಸಿದೆ. 
 
ಅಖಿಲ್ ಗುಜರಾತ್ ಬ್ರಾಹ್ಮಣ ಸಮಾಜದ ಮುಖಂಡರು ಶೈಲೇಶ್ ಜೋಷಿ ನೇತೃತ್ವದಲ್ಲಿ ನಿನ್ನೆ ಸಭೆ ಸೇರಿ, ಮೀಸಲಾತಿ ಮತ್ತು ಸರಕಾರಿ ವೇತನ ಸೇರಿದಂತೆ ಹಲವಾರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ.
 
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಷಿ, ತಮಿಳಉನಾಡಿನಲ್ಲಿ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸರಕಾರವೇ ವೇತನ ಪಾವತಿಸುತ್ತದೆ. ಅದರಂತೆ, ಗುಜರಾತ್ ಸರಕಾರ ಕೂಡಾ ತಮಿಳುನಾಡು ಸರಕಾರದಂತೆ ಅರ್ಚಕರಿಗೆ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.   
 

ವೆಬ್ದುನಿಯಾವನ್ನು ಓದಿ