ಮೋದಿಯದ್ದು ಕೀಳುಮಟ್ಟದ ರಾಜಕೀಯ: ಸೋನಿಯಾ ಗಾಂಧಿ

ಶುಕ್ರವಾರ, 9 ಮೇ 2014 (09:31 IST)
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 'ನೀಚ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಮಗಳು ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಕೂಡ ಮೋದಿ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಪ್ರಚಾನ ನಡೆಸುತ್ತಿದ್ದ ಅವರು  "ಮಾಜಿ ಪ್ರಧಾನಿ ಮತ್ತು ತಮ್ಮ ಪತಿ ದಿ. ರಾಜೀವ್ ಗಾಂಧಿ ಅವರನ್ನು ಮೋದಿ ಅವರು ಪದೇ ಪದೆ ಅವಮಾನಿಸುತ್ತಿದ್ದಾರೆ. ಇಂತಹ ಕೆಳಮಟ್ಟದ ರಾಜಕೀಯವು ಮೋದಿ ಅವರಿಗಾಗಲೀ, ರಾಷ್ಟ್ರ ರಾಜಕಾರಣಕ್ಕಾಗಲೀ ಸರಿಕಾಣುವುದಿಲ್ಲ". 
 
"ಅಟಲ್ ಬಿಹಾರಿವಾಜಪೇಯಿ ಹಾಗೂ ಇತರೆ ಪ್ರಧಾನಿಗಳು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಂಡಿದ್ದರು. ಆದರೆ ಮೋದಿ ಅವರು ರಾಜೀವ್ ಬಗ್ಗೆ ಆಡುತ್ತಿರುವ ಮಾತುಗಳು ಅವರೆಷ್ಟು ನೀಚ ಮಟ್ಟಕ್ಕಿಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ"
 
"ಇತರರ ಮಾತುಗಳನ್ನು ಸಹನೆಯಿಂದ ಆಲಿಸುವವ ಮತ್ತು ಪ್ರೀತಿ, ಸೌಹಾರ್ದತೆಯ ಸಂದೇಶ ಸಾರುವವನೇ ಉತ್ತಮ ಮುಖಂಡ ಎನಿಸುತ್ತಾನೆ. ಆದರೆ ಮೋದಿ ಅವರ ಮಾತುಗಳಲ್ಲಿ ದ್ವೇಷ ತಾಂಡವವಾಡುತ್ತಿರುತ್ತದೆ. ಈ ಕೋಪವು ಮನಸ್ಸಿನೊಳಗಿನ ಕೋಪ ಮತ್ತು ದ್ವೇಷದ ಸಂಕೇತ" ಎಂದು ಸೋನಿಯಾ ಕಿಡಿಕಾರಿದ್ದಾರೆ.  

ವೆಬ್ದುನಿಯಾವನ್ನು ಓದಿ