ತಿರುವನಂತರಪುರಂ: ತಮಿಳುನಾಡಿನಲ್ಲಿ ಈಗಾಗಲೇ ಪೆಪ್ಸಿ, ಕೋಕೋ ಕೋಲಾದಂತಹ ತಂಪು ಪಾನೀಯಗಳನ್ನು ನಿಷೇಧಿಸಿಲಾಗಿದೆ. ಇನ್ನು, ಇದು ಕೇರಳದಲ್ಲೂ ನಿಷೇಧವಾಗುವ ಸಾಧ್ಯತೆಯಿದೆ.
ಜಲಮೂಲಗಳನ್ನು ಬರಿದಾಗಿಸುತ್ತದೆ ಎನ್ನುವ ಕಾರಣಕ್ಕೆ ತಮಿಳುನಾಡಿನಲ್ಲಿ ಈ ತಂಪು ಪಾನೀಯಗಳು ನಿಷೇಧವಾಗಿದೆ. ಇದೀಗ ಕೇರಳ ಕೂಡಾ ಪೆಪ್ಸಿ ಕಂಪನಿಯ ನೀರು ಬಳಕೆ ಮೇಲೆ ನಿರ್ಬಂಧ ಹೇರಲು ಮುಂದಾಗಿದೆ.
ಈ ಬಗ್ಗೆ ಕೇರಳ ನೀರಾವರಿ ಸಚಿವ ಮ್ಯಾಥ್ಯೂ ಟಿ ಥಾಮಸ್ ವಿಧಾನಸಭೆಯಲ್ಲಿ ಸೂಚನೆ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಪೆಪ್ಸಿ ಕಂಪನಿಗೆ ಕಡಿಮೆ ನೀರು ಬಳಸುವಂತೆ ನೋಟೀಸು ನೀಡಿದೆಯಂತೆ. ಮುಂದಿನ ದಿನದಲ್ಲಿ ಸಂಪೂರ್ಣವಾಗಿ ಇದನ್ನು ನಿಷೇಧಿಸಿದರೂ, ಅನುಮಾನವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ