ಸಚಿವೆ ಸುಷ್ಮಾ ಸ್ವರಾಜ್ ಗೆ ಈಗ ಮತ್ತೊಬ್ಬ ಹೆಣ್ಣುಮಗಳ ರಕ್ಷಿಸುವ ಜವಾಬ್ದಾರಿ

ಸೋಮವಾರ, 29 ಮೇ 2017 (11:45 IST)
ನವದೆಹಲಿ: ಮೊನ್ನೆಯಷ್ಟೇ ಪಾಕಿಸ್ತಾನದಲ್ಲಿ ಬಲವಂತದಿಂದ ಮದುವೆಯಾಗಿದ್ದ ಪತಿಯ ಕೈಯಿಂದ ದೆಹಲಿ ಮೂಲದ ಯುವತಿ ಉಜ್ಮಾಳನ್ನು ರಕ್ಷಿಸಿದ ಬೆನ್ನಲ್ಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಇನ್ನೊಬ್ಬ ಸಂತ್ರಸ್ತೆಯನ್ನು ರಕ್ಷಿಸುವ ಬೇಡಿಕೆ ಬಂದಿದೆ.

 
ಕಳೆದ 9 ವರ್ಷಗಳಿಂದ ತಮ್ಮ ಪುತ್ರಿ ಪಾಕಿಸ್ತಾನದಲ್ಲಿ ಗಂಡನ ಮನೆಯಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದಾಳೆ. ಆಕೆಯನ್ನು ರಕ್ಷಿಸಿ ಎಂದು ಹೈದರಾಬಾದ್ ನ ದಂಪತಿ ಮನವಿ ಸಲ್ಲಿಸಿದ್ದಾರೆ.

‘ಉಜ್ಮಾಳನ್ನು ಭಾರತ ಸರ್ಕಾರ ಕಾಪಾಡಿತು. ಅದೇ ರೀತಿ ನನ್ನ ಮಗಳು ಮುಹಮ್ಮದೀನ್ ಬೇಗಮ್ ಳನ್ನೂ ಕಾಪಾಡಿ. ಹಲವು ವರ್ಷಗಳಿಂದ ಆಕೆ ಭಾರತಕ್ಕೆ ಬಂದಿಲ್ಲ’ ಎಂದು ದಂಪತಿ ಆಗ್ರಹಿಸಿದ್ದಾರೆ. ತಮ್ಮ ಪುತ್ರಿ ಆಗಾಗ ಕರೆ ಮಾಡಿ ಅಲ್ಲಿ ತನಗಾಗುತ್ತಿರುವ ಚಿತ್ರಹಿಂಸೆ ಬಗ್ಗೆ ಹೇಳುತ್ತಿರುತ್ತಾಳೆ. ಅವಳಿಗೆ ಭಾರತಕ್ಕೆ ಮರಳುವಾಸೆಯಿದೆ. ಸಹಾಯ ಮಾಡಿ ಎಂದು ಬೇಗಮ್ ತಾಯಿ ಸಚಿವೆ ಸುಷ್ಮಾಗೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ