ಮಾರನ್ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಇಡಿ

ಶುಕ್ರವಾರ, 3 ಫೆಬ್ರವರಿ 2017 (16:48 IST)
ಏರ್`ಸೆಲ್ ಮತ್ತು ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿ​ಸಿದಂತೆ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್, ಅವರ ಸಹೋದರರು ಮತ್ತು ಇತರ ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ಸುಪ್ರೀಂ ಮೊರೆ ಹೋಗಿದೆ. 
 
ಪ್ರಕರಣಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಬಿಡುಗಡೆ ಮಾಡದಂತೆ ಕೂಡ ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ನ್ನು ಒತ್ತಾಯಿಸಿದ್ದಾರೆ. ಸಿಬಿಐ ಕೋರ್ಟ್ ಆದೇಶಕ್ಕೆ ತತ್‌ಕ್ಷಣಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಿಸಿದ್ದು, ಮುಂದಿನ ಬುಧವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. 
 
ಏರ್`ಸೆಲ್ ಮತ್ತು ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿ​ಸಿದಂತೆ ಮಾಜಿ ಟೆಲಿಕಾಂ ಸಚಿವ ಮತ್ತವರ ಸಹೋದರರಿಗೆ ಬಿಗ್ ರಿಲೀಫ್ ನೀಡಿದ್ದ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ಅವರನ್ನು ಖುಲಾಸೆಗೊಳಿಸಿತ್ತು.
 
ಕಳಾನಿಧಿ ಪತ್ನಿ ಕಾವೇರಿ, ಸೌತ್ ಏಶ್ಯನ್‌ ಎಫ್‌ಎಂ ಲಿ. ಮುಖ್ಯಸ್ಥ ಷಣ್ಮುಗಂ, ಮಾರನ್‌ ಕುಟುಂಬದ ಒಡೆತನದಲ್ಲಿರುವ ಸನ್‌ ಡೈರೆಕ್ಟ್ ಟೀವಿ ಲಿ. ಕಂಪನಿ, ಸೌತ್‌  ಎಂಟರ್‌ಟೇನ್‌`ಮೆಂಟ್‌ ಹೋಲ್ಡಿಂಗ್ಸ್‌ ಲಿ. ಕಂಪನಿಗಳ ಮೇಲಿನ ಆರೋಪಗಳನ್ನು ಕೋರ್ಟ್ ಕೈಬಿಟ್ಟಿತ್ತು. 
 
ಇವರ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸೂಕ್ತ ಸಾಕ್ಷಿಗಳಿಲ್ಲ ಮತ್ತು ಸಾಕ್ಷಿಗಳ ಹೇಳಿಕೆಯಲ್ಲಿ ವ್ಯತ್ಯಾಸವಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ